Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ನೂತನ ಸಚಿವರಿಗೆ ವಿಧಾನಸೌಧ,ವಿಕಾಸಸೌಧದಲ್ಲಿ ಕೊಠಡಿ ಹಂಚಿಕೆ ಮಾಡಿ ಸರ್ಕಾರ ಆದೇಶ

---Advertisement---

ಬೆಂಗಳೂರು: ರಾಜ್ಯ ಸರ್ಕಾರವು ನೂತನ ಉಪ ಮುಖ್ಯಮಂತ್ರಿ ಹಾಗೂ ನೂತನವಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಂಪುಟ ದರ್ಜೆ ಸಚಿವರು ಮತ್ತು ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರಿಗೆ ವಿಧಾನಸೌಧ ಹಾಗೂ ವಿಕಾಸಸೌಧ ಕಟ್ಟಡಗಳಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಕೊಠಡಿಗಳನ್ನು ಹಂಚಿಕೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಜೂನ್ 3, 2026 ರಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರಿಗೆ ಈ ಕೊಠಡಿಗಳನ್ನು ನಿಯೋಜಿಸಲಾಗಿದ್ದು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (DPAR) ಅಧೀನ ಕಾರ್ಯದರ್ಶಿ ಆರ್. ಯದು ಕುಮಾರ್ ಅವರು ಜೂನ್ 8, 2026 ರಂದು ಈ ಆದೇಶಕ್ಕೆ ಸಹಿ ಹಾಕಿದ್ದಾರೆ.

ಕ್ರ.ಸಂ. ಸಚಿವರು / ಸಲಹೆಗಾರರ ಹೆಸರು ಮತ್ತು ಇಲಾಖೆ ಹಂಚಿಕೆ ಮಾಡಿರುವ ಕೊಠಡಿ ಮತ್ತು ಕಟ್ಟಡ
1

ಡಾ. ಜಿ. ಪರಮೇಶ್ವರ್

ಮಾನ್ಯ ಉಪ ಮುಖ್ಯಮಂತ್ರಿಗಳು (ಕಂದಾಯ ಮತ್ತು ಕ್ರೀಡಾ ಇಲಾಖೆ)

ಕೊಠಡಿ ಸಂಖ್ಯೆ: 327 – 327 ಎ

(ವಿಧಾನಸೌಧ)

2

ಶ್ರೀ ಕೆ.ಎಚ್. ಮುನಿಯಪ್ಪ

ಮಾನ್ಯ ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳ ಸಚಿವರು

ಕೊಠಡಿ ಸಂಖ್ಯೆ: 340ಎ – 341 – 341ಎ

(ವಿಧಾನಸೌಧ)

3

ಶ್ರೀ ಕೆ.ಜೆ. ಜಾರ್ಜ್

ಮಾನ್ಯ ಇಂಧನ ಹಾಗೂ ಪ್ರವಾಸೋದ್ಯಮ ಸಚಿವರು

ಕೊಠಡಿ ಸಂಖ್ಯೆ: 317 – 317 ಎ

(ವಿಧಾನಸೌಧ)

4

ಶ್ರೀ ಎಂ.ಬಿ. ಪಾಟೀಲ್

ಮಾನ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವರು

ಕೊಠಡಿ ಸಂಖ್ಯೆ: 344 – 344 ಎ

(ವಿಧಾನಸೌಧ)

5

ಶ್ರೀ ರಾಮಲಿಂಗಾರೆಡ್ಡಿ

ಮಾನ್ಯ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರು

ಕೊಠಡಿ ಸಂಖ್ಯೆ: 335 – 336, 337 – 337ಎ

(ವಿಧಾನಸೌಧ)

6

ಶ್ರೀ ಸತೀಶ್ ಜಾರಕಿಹೊಳಿ

ಮಾನ್ಯ ಲೋಕೋಪಯೋಗಿ ಸಚಿವರು

ಕೊಠಡಿ ಸಂಖ್ಯೆ: 444 – 445

(ವಿಕಾಸಸೌಧ)

7

ಶ್ರೀ ಕೃಷ್ಣ ಬೈರೇಗೌಡ

ಮಾನ್ಯ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು (GBA, BWSSB, BMRCL)

ಕೊಠಡಿ ಸಂಖ್ಯೆ: 244 – 245

(ವಿಕಾಸಸೌಧ)

8

ಶ್ರೀ ಪ್ರಿಯಾಂಕ್ ಖರ್ಗೆ

ಮಾನ್ಯ ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ, ಇ-ಆಡಳಿತ ಸಚಿವರು

ಕೊಠಡಿ ಸಂಖ್ಯೆ: 242 – 243

(ವಿಕಾಸಸೌಧ)

9

ಶ್ರೀ ಯು. ಟಿ. ಖಾದರ್

ಮಾನ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು

ಕೊಠಡಿ ಸಂಖ್ಯೆ: 315 – 315ಎ

(ವಿಧಾನಸೌಧ)

10

ಶ್ರೀ ಈಶ್ವರ ಖಂಡ್ರೆ

ಮಾನ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು

ಕೊಠಡಿ ಸಂಖ್ಯೆ: 36 – 37

(ವಿಕಾಸಸೌಧ)

11

ಡಾ. ಯತೀಂದ್ರ ಸಿದ್ದರಾಮಯ್ಯ

ಮಾನ್ಯ ನಗರಾಭಿವೃದ್ಧಿ ಸಚಿವರು

ಕೊಠಡಿ ಸಂಖ್ಯೆ: 314 – 314 ಎ

(ವಿಧಾನಸೌಧ)

12

ಶ್ರೀ ಬೈರತಿ ಸುರೇಶ್


ಮಾನ್ಯ ಸಾರಿಗೆ ಸಚಿವರು

ಕೊಠಡಿ ಸಂಖ್ಯೆ: 316 – 316 ಎ

(ವಿಧಾನಸೌಧ)

13

ಡಾ. ಶರಣಪ್ರಕಾಶ್ ಪಾಟೀಲ್

ಮಾನ್ಯ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರು

ಕೊಠಡಿ ಸಂಖ್ಯೆ: 344 – 345

(ವಿಕಾಸಸೌಧ)

14

ಶ್ರೀ ಎಲ್.ಕೆ. ಅತೀಕ್

ಮಾನ್ಯ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರು

ಕೊಠಡಿ ಸಂಖ್ಯೆ: 329

(ವಿಧಾನಸೌಧ)

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now