Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸರ್ಕಾರ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ : ಮುರಳಿಧರ ಹಾಲಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ
ಸುರೇಶ್ ಪಟ್ಟಣ್,
ಮೊ :87220 22817

ಚಿತ್ರದುರ್ಗ,(ಡಿ.11) :  ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಿ ಅವರಿಗೆ ಸರಿಯಾದ ರೀತಿಯಲ್ಲಿ ಮೂಲ ಸೌಲಭ್ಯಗಳನ್ನು ನೀಡದೆ ಸರ್ಕಾರ ವಿದ್ಯಾರ್ಥಿಗಳಿಗೆ ವಂಚನೆ ಮಾಡುತ್ತಿದೆ. ಇಂದಿನ ಸರ್ಕಾರದಿಂದ ಓದುವ ಮಕ್ಕಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಉಸ್ತುವಾರಿಗಳಾದ ಮುರಳಿಧರ ಹಾಲಪ್ಪ ಆರೋಪಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ಶಿಕ್ಷಣವನ್ನು ಖಾಸಗಿಕರಣ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ನೀಡಬೆಕಾದ ವಿವಿಧ ರೀತಿಯ ಸೌಲಭ್ಯಗಳನ್ನು ನೀಡದೇ ವಂಚನೆ ಮಾಡುತ್ತಿದೆ. ಶಾಲೆ ಪ್ರಾರಂಭವಾಗಿ ಹಲವಾರು ತಿಂಗಳಾಗಿದ್ದರೂ ಸಹಾ ಇದುವರೆವಿಗೂ ಪಠ್ಯವನ್ನು ನೀಡಿಲ್ಲ, ಸಮವಸ್ತ್ರ, ಷೂ, ಸಾಕ್ಸ್ ಅನ್ನು ನೀಡಿಲ್ಲ, ಬಡ ವಿದ್ಯಾರ್ಥಿಗಳಿಗೆ ಆಧಾರವಾದ
ಸ್ಕಾಲರ್ ಶಿಪ್  ಸಹಾ ಈ ಬಾರಿ ನೀಡದೆ ಅನ್ಯಾಯ ಮಾಡಿದೆ ಎಂದು ದೂರಿದರು.

ಈ ರೀತಿಯಾದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದರೂ ಸಹಾ ಅದರ ಬಗ್ಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ, ಇದರಿಂದ ಮಕ್ಕಳಿಗೆ ಅನ್ಯಾಯವಾಗಿದೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾದ ಬಸ್ ಪಾಸ್ ನೀಡದೇ ಅನ್ಯಾಯ ಮಾಡುತ್ತಿದ್ದು ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಇದರ ಬಗ್ಗೆ ಜನವರಿ 1 ರಿಂದ ಅಭಿಯಾನವನ್ನು ನಡೆಸಲಾಗುವುದು ಎಂದ ಅವರು ಇನ್ನೂ ಮಕ್ಕಳಿಗೆ ಸೈಕಲ್ ನೀಡುವುದು ಸಹಾ ದೂರವಾಗಿದೆ ಎಂದರು.

ಸರ್ಕಾರ ಮತದಾನದ ಚೀಟಿಯಲ್ಲಿ ಒಂದು ಜನಾಂಗದ ಮತದಾರರ ಹೆಸರನ್ನು ತೆಗೆದು ಹಾಕಲಾಗಿದೆ ಇದರ ಬಗ್ಗೆ ಕಾಂಗ್ರೆಸ್ ಹೋರಾಟವನ್ನು ಮಾಡಲಾಗುತ್ತದೆ. ಚುನಾವಣೆಯನ್ನು ಮುಂದೆ ಇಟ್ಟುಕೊಂಡು ಸರ್ಕಾರ ಮುಂದೆ ತಾನೇ ಗೆಲ್ಲಬೇಕು ಎಂಬ ದುರುದ್ದೇಶದಿಂದ ಈ ರೀತಿಯಾದ ಮತದಾರರ ಹೆಸರನ್ನು ರದ್ದು ಮಾಡಿದೆ. ಇದನ್ನು ಕಾಂಗ್ರಸ್ ಗಂಭೀರವಾಗಿ ಪರಿಗಣಿಸಿದೆ. ಕಾಂಗ್ರೆಸ್ ಪಕ್ಷದವರನ್ನು ಮನೆ ಮನೆಗೆ ಕಳುಹಿಸಿ ಮತದಾರರ ಹೆಸರನ್ನು ಪರೀಶಿಲಿಸಿ ಹೊಸದಾಗಿ ಸೇರ್ಪಡೆಯಾಗುವವರನ್ನು ಸೇರಿಸಿ ಬಿಟ್ಟು ಹೋದವರನ್ನು ಸೇರಿಸುವ ಕಾರ್ಯವನ್ನು ಮಾಡಲಾಗುತ್ತದೆ. ಇದಕ್ಕಾಗಿ ಪಕ್ಷದಿಂದ ಅಧಿಕೃತವಾಗಿ ನೇಮಕ ಮಾಡಲಾಗುವುದು ಇವರು ಸರ್ಕಾರ ಮತ್ತು ಮತದಾರರ ಮಧ್ಯೆ ಕೊಂಡಿಯಾಗಿ ಕೆಲಸವನ್ನು ಮಾಡಲಿದ್ದಾರೆ ಎಂದು ಹಾಲಪ್ಪ ತಿಳಿಸಿದರು.

ಮತದಾನ ಸಂವಿಧಾನ ನೀಡಿದ ಹಕ್ಕಾಗಿದೆ. ಇದರಿಂದ ಯಾರು ಸಹಾ ವಂಚಿತರಾಗಬಾರದು, ಇದರಿಂದ ಡಿ.30ರವರೆಗೆ ಮತದಾರರ ಹೆಸರನ್ನು ನೊಂದಾಯಿಸಲು ಅವಕಾಶ ಇದೆ ಇದರ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಮತದಾರರಿಗೆ ನೀಡಿಲ್ಲ, ಪಕ್ಷದವರು ಇದರ ಬಗ್ಗೆ ಪರೀಶಿಲಿಸಿದ್ದಾರೆ ಅಗತ್ಯ ಇದ್ದರೆ ಸೇರ್ಪಡೆಯನ್ನು ಮಾಡಲಾಗುತ್ತದೆ. ಅಗತ್ಯ ಇರುವವರು ಕಾಂಗ್ರೇಸ್ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಡಿಸಂಬರ್‍ಗೆ 18 ವರ್ಷ ತುಂಬಿದವರು ತಮ್ಮ ಹೆಸರನ್ನು ಮತದಾರರ ಗುರುತಿನ ಚೀಟಿಗೆ ನೂಂದಾಯಿಸಬಹುದಾಗಿದೆ ಎಂದರು.

ನೇಮಕಾತಿ : ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಉಪಾಧ್ಯಕ್ಷರಾಗಿ 10 ಜನ, ಪ್ರದಾನ ಕಾರ್ಯದರ್ಶಿಗಳಾಗಿ 13 ಜನ ಕಾರ್ಯದರ್ಶಿಗಳಾಗಿ 17 ಜನ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಇಬ್ಬರು, ಓರ್ವ ಖಂಜಾಚಿ, ಓರ್ವ ವಕ್ತಾರರನ್ನಾಗಿ ಹಾಗೂ ನಗರದ 35 ವಾರ್ಡಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶವನ್ನು ಹೊರಡಿಸಿದ ಹಾಲಪ್ಪ ಅವರಿಗೆ ನೇಮಕಾತಿ ಪತ್ರವನ್ನು ಹಸ್ತಾಂತರ ಮಾಡಿದರು.

ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾಜ್‍ಪೀರ್, ಕಾರ್ಯಾಧ್ಯಕ್ಷರಾದ ಹಾಲಸ್ವಾಮಿ, ಮುಖಂಡರಾದ ಡಾ.ಹೆಚ್.ಎ. ಷಣ್ಮುಖಪ್ಪ, ಮೈಲಾರಪ್ಪ, ನಗರ ಬ್ಲಾಕ್ ಅಧ್ಯಕ್ಷ ಯು ಲಕ್ಷ್ಮೀಕಾಂತ್, ಡಿ.ಟಿ. ವೆಂಕಟೇಶ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಆರ್.ಪ್ರಕಾಶ್ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

RCB ಸೇರ್ತಾರೆ ಅಂದುಕೊಂಡ್ರೆ ಕನ್ನಡಿಗ ರಾಹುಲ್ ಡೆಲ್ಲಿ ಪಾಲು..!

RCB ಕ್ರೇಜ್ ಎಷ್ಟಿದೆ‌ ಎಂಬುದನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ. ಐಪಿಎಲ್ ಶುರುವಾಗುವ ಮುನ್ನವೇ ಆರ್ಸಿಬಿ ಫೀವರ್ ಅಭಿಮಾನಿಗಳಲ್ಲಿ ಜೋರಾಗಿ ಬಿಡುತ್ತದೆ. ಆರ್ಸಿಬಿ ಅಂದ್ರೆ ಅಷ್ಟು ಪ್ರೀತಿ ಕನ್ನಡಿಗರಿಗೆ. ಈಗ ಆರ್ಸಿಬಿ ಫ್ಯಾನ್ಸ್ ಖುಷಿ ಪಡೋ

error: Content is protected !!