ಬೆಂಗಳೂರು: ರಾಜ್ಯದೆಲ್ಲಡೆ ಈಗ ಓಮಿಕ್ರಾನ್ ಆತಂಕದ ಹೆಚ್ಚಾಗಿದೆ. ಹೀಗಾಗಿ ವೈರಸ್ ಗಳಿಂದ ದೂರವಿರಲು ವ್ಯಾಕ್ಸಿನ್ ಒಂದೇ ಪರಿಹಾರ. ಹೀಗಾಗಿ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಲು ಸರ್ಕಾರ ಕಟ್ಟುನಿಟ್ಟಾಗಿ ಸೂಚಿಸಿದೆ. ಜೊತೆಗೆ ಸರ್ಕಾರದ ಸೌಲಭ್ಯ ಪಡೆಯಲು ವ್ಯಾಕ್ಸಿನ್ ಎರಡು ಡೋಸ್ ಕಡ್ಡಾಯಗೊಳಿಸಿ, ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪಡಿತರ, ಪೆಟ್ರೋಲ್, ಡೀಸೆಲ್, ವೇತನ, ಪಿಂಚಣಿ, ನೀರು ಸಂಪರ್ಕ ಪಡೆಯಲು ವ್ಯಾಕ್ಸಿನ್ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಬಳಕೆಗೂ ಎರಡು ಡೋಸ್ ಕಡ್ಡಾಯ ಮಾಡಲಾಗಿದೆ. ಜನದಟ್ಟಣೆಯ ಪ್ರದೇಶಗಳಲ್ಲಿ ಕಡ್ಡಾಯ ಕೋವಿಡ್ ತಪಾಸಣೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಶಾಲಾ ಮಕ್ಕಳಿಗೂ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಲಾಗಿದೆ. ಸಭೆ ಸಮಾರಂಭಗಳಲ್ಲಿಯೂ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಐನೂರಕ್ಕಿಂತ ಹೆಚ್ಚು ಜನರು ಭಾಗಿಯಾಗಲು ಅವಕಾಶ ನೀಡಬಾರದು ಎಂದು ಸೂಚಿಸಿದೆ. ಒಳಾಂಗಣ ಸಭಾಂಗಣದಲ್ಲಿ 200 ಮಂದಿಗೆ ಅವಕಾಶ ನೀಡಿದೆ.
ಮಾಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಸತಿ ಗೃಹಗಳಲ್ಲಿ ವಿಶೇಷ ಲಸಿಕಾ ಅಭಿಯಾನ
ಓಮಿಕ್ರಾನ್ ವೈರಾಣು ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಕ್ರಮ
ಶಾಲಾ ಕಾಲೇಜು ಮುಚ್ಚುವ ಅಗತ್ಯವಿಲ್ಲ, ಆದರೆ ಕೋವಿಡ್ ನಿಯಮಾವಳಿ ಪಾಲನೆ ಮಾಡಬೇಕು
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ನೆಗೆಟಿವ್ ವರದಿ ಇದ್ದರೂ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ
ಮನೆಯಲ್ಲಿ ಕ್ವಾರಂಟೈನ್ ಇರುವವರ ಮೇಲೆ ನಿಗಾ
ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಆದ ಇಂತಿಷ್ಟು ಪ್ರತಿಶತ ಜಿನೋಮಿಕ್ ಸ್ವೀಕ್ವೆನ್ಸ್ ಗೆ ಒಳಪಡಿಸಬೇಕು. ಕಳೆದ 14 ದಿನಗಳ ಹಿಂದೆ ಬಂದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್ ಟಿ ಪಿ ಸಿ ಆರ್ ಕಡ್ಡಾಯ ಮಾಡಲಾಗಿದೆ.