ಸರ್ಕಾರಿ ನೌಕರರೇ ಬಳಸ್ತಿದ್ದಾರೆ ಬಿಪಿಎಲ್ ಕಾರ್ಡ್ : ಚಿತ್ರದುರ್ಗ ಜಿಲ್ಲೆಯೊಂದರಲ್ಲೇ 60 ಲಕ್ಷ ದಂಡ ವಸೂಲಿ..!

1 Min Read

ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಕೂಡ ಒಂದು. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಐದು ಕೆಜಿ ಅಕ್ಕಿಯ ಜೊತೆಗೆ ಇನ್ನು ಐದು ಕೆಜಿ ಅಕ್ಕಿಯ ಹಣವನ್ನು ನೀಡಲಾಗುತ್ತಿದೆ. ಆದರೆ ಅದೆಷ್ಟೋ ಬಿಪಿಎಲ್ ಕಾರ್ಡುದಾರರು ಇದರ ಫಲಾನುಭವಿಗಳೇ ಆಗಿರುವುದಿಲ್ಲ. ದೊಡ್ಡಮಟ್ಟಕ್ಕೆ ತೋಟ ಇರುವವರು, ಸರ್ಕಾರಿ ಕೆಲಸದಲ್ಲಿರುವವರು ತಮ್ಮ ಪ್ರಭಾವ ಬಳಸಿ ಕಾರ್ಡ್ ಗಳನ್ನ ಮಾಡಿಸಿಕೊಂಡಿದ್ದಾರೆ. ಇದರಿಂದ ಸರ್ಕಾರಕ್ಕೂ ಹೆಚ್ಚಿನ ಹೊರೆಯಾಗುತ್ತಿರುವ ಕಾರಣ, ಅನರ್ಹ ಕಾರ್ಡಗ ಗಳನ್ನು ರದ್ದು ಮಾಡಿ, ದಂಡ ಹಾಕಲು ಸರ್ಕಾರ ಸೂಚನೆ ನೀಡಿದೆ. ಅದರಂತೆ ಈಗಾಗಲೇ ಅಧಿಕಾರಿಗಳು ಅಖಾಡಕ್ಕೆ ಇಳಿದಿದ್ದು, ಅನರ್ಹ ಕಾರ್ಡ್ ಗಳ ಕೌಂಟ್ ಮಾಡಿಕೊಂಡಿದ್ದಾರೆ.

ಈಗಾಗಲೇ ಚಿತ್ರದುರ್ಗದಲ್ಲಿ ಅನರ್ಹರನ್ನು ಕಂಡು ಹಿಡಿದು ಕಾರ್ಡ್ ಗಳನ್ನು ರದ್ದು‌ ಮಾಡುವ ಕೆಲಸ ಆರಂಭವಾಗಿದೆ. ಮೃತರ ಹೆಸರುಗಳು ಈಗಲೂ ಆಕ್ಟೀವ್ ಆಗಿರುವುದು ಸಹ ಕಂಡು ಬಂದಿದೆ. ಚಿತ್ರದುರ್ಗ ಜಿಲ್ಲೆ ಒಂದರಲ್ಲಿಯೇ 60 ಲಕ್ಷ ದಂಡ ವಸೂಲಿಯಾಗಿದೆ.

ಹಾಗಾದ್ರೆ ಅನರ್ಹ ಪಡಿತರ ಚೀಟಿ ಪಡೆದವರಿಂದ ಎಲ್ಲೆಲ್ಲಿ, ಎಷ್ಟೆಷ್ಟು ದಂಡ ವಸೂಲಿ ಮಾಡಲಾಗಿದೆ ಎಂಬ ಡಿಟೈಲ್ ಇಲ್ಲಿದೆ‌. ಚಿತ್ರದುರ್ಗ ಜಿಲ್ಲೆಯಲ್ಲಿ ಒಟ್ಟು 60,10,869 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಚಳ್ಳೆಕೆರೆ: 9,54,942 ರೂಪಾಯಿ, ಚಿತ್ರದುರ್ಗ ಗ್ರಾಮಾಂತರ: 10,87,846 ರೂ. ಚಿತ್ರದುರ್ಗ ನಗರ : 17,24,727 ರೂ. ಹಿರಿಯೂರು: 10,40,947 ರೂ. ಹೊಳಲ್ಕೆರೆ : 3,36,254 ರೂ. ಹೊಸದುರ್ಗ : 5,17,309 ರೂ. ಮೊಳಕಾಲ್ಮೂರು : 3,48,844 ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ‌.

Share This Article
Leave a Comment

Leave a Reply

Your email address will not be published. Required fields are marked *