ಮಡಿಕೇರಿ: ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಹೋಗುವವರು ಸಾಕಷ್ಟು ನಂದಿ ಇದ್ದಾರೆ. ಇನ್ನಷ್ಟು ಉತ್ತೇಜನ ನೀಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದಕ್ಕೆಂದೆ, ಮಿನಿ ವಿಮಾನ ನಿಲ್ದಾಣ ಮಾಡಲು ಯೋಜನೆ ಹಾಕಿಕೊಂಡಿದೆ ಎನ್ನಲಾಗಿದೆ. ಅದಕ್ಕೆಂದೆ ಕೊಡಗಿನಲ್ಲಿ ಈಗಾಗಲೇ ಸ್ಥಳ ಪರಿಶೀಲನೆಯನ್ನು ಮಾಡಿದೆ.
ಮಿನಿ ವಿಮಾನ ನಿಲ್ದಾಣ ಅಥವಾ ಹೆಲಿಪೋರ್ಟ್ ಮಾಡಲು ಕುಶಾಲನಗರ ತಾಲೂಕಿನಲ್ಲಿರುವ ಸೈನಿಕರ ಶಾಲೆ ಪಕ್ಕ ಜಾಗ ಗುರುತಿಸಲಾಗಿದೆ. ಸುಮಾರು 49.5 ಎಕರೆ ಕೃಷಿ ಭೂಮಿಯನ್ನು ಇದಕ್ಕಾಗಿ ಗುರುತಿಸಲಾಗಿದೆ. ಈಗಾಗಲೇ ಅಧಿಕಾರಿಗಳು, ತಂತ್ರಜ್ಞರು, ಕೆಎಸ್ಐಐಡಿಸಿ ನಿರ್ದೇಶಕರು, ಸ್ಥಳೀಯ ಶಾಸಕರು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ಜಾಗದಲ್ಲಿ ಮೈಸೂರು, ಚಿಕ್ಕಮಗಳೂರು, ಹಂಪಿ ಯೋಜಿತ ಹೆಲಿಪೋರ್ಟ್ ಸಂಪರ್ಕಿಸುವ ಹೆಲಿಪೋರ್ಟ್ ಸಂಪರ್ಕಿಸಲು ಯೋಜನೆ ರೂಪಿಸಲಾಗುತ್ತಿದೆ.
ಕೊಡಗಿಗೆ ಬರುವ ಪ್ರವಾಸಿಗರಲ್ಲಿ ವಿದೇಶಿ ಪ್ರವಾಸಿಗರು ಕೂಡ ಇದ್ದಾರೆ. ವಿಮಾನ ನಿಲ್ದಾಣದ ಸೇವೆ ಆರಂಭವಾದರೆ ಪ್ರತಿ ವಾರಾಂತ್ಯದಲ್ಲಿ 20 ಸಾವಿರದಿಂದ 50 ಸಾವಿರ ಒ್ರವಾಸಿಗರು ಬರಲು ಅವಕಾಶವಿರುತ್ತದೆ. ಈ ಮೂಲಕ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚು ಮಾಡಿದಂತೆ ಆಗುತ್ತದೆ.