ವಿಕಲಚೇತನ ಮಕ್ಕಳ ಆರೈಕೆದಾರರಿಗೆ ಸರ್ಕಾರದ ನೆರವು : ವೈಶಾಲಿ

2 Min Read

ಚಿತ್ರದುರ್ಗ ಫೆ.17: ವಿಕಲಚೇತನ ಮಕ್ಕಳ ಪೋಷಕರು ಮತ್ತು ಆರೈಕೆದಾರರಿಗೆ ಸರ್ಕಾರದಿಂದ ಭತ್ಯೆ ನೀಡಲಾಗುತ್ತದೆ ಎಂದು ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಇಲಾಖೆಯ ಅಧಿಕಾರಿ ಶ್ರೀಮತಿ ವೈಶಾಲಿ ಹೇಳಿದರು.

 

ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಹಾಗೂ ಸಿಬಿಎಂ ಇಂಡಿಯಾ ಟ್ರಸ್ಟ್ ಮತ್ತು ಸ್ಪೂರ್ತಿ ವಿಕಲಚೇತನ ಟ್ರಸ್ಟ್ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಕಲಚೇತನರ ಆರೋಗ್ಯ ಸಮಸ್ಯೆಗಳ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯವರು ಜಿಲ್ಲಾ ಮಟ್ಟದಲ್ಲಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಸೊನ್ನೆ ಇಂದ ಹದಿನೆಂಟರವರೆಗಿನ ಮಕ್ಕಳ ಆರೋಗ್ಯ ಕ್ಷೇಮ ಮತ್ತು ಅವರ ಪಾಲಕ ಮತ್ತ ಆರೈಕೆದಾರರ ಕುರಿತು ಹಮ್ಮಿಕೊಳ್ಳಲಾಗಿರುವ ಕಾರ್ಯಗಾರವು ಪ್ರಸ್ತುತ ಸಂದರ್ಭದಲ್ಲಿ ತುರ್ತು ಅಗತ್ಯವಿದೆ ಎಂದು ಹೇಳಿದರು.

 

ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಪ್ಪಿಕೊಂಡರೆ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ವಿಆರ್‍ಡಬ್ಲ್ಯೂ ಮತ್ತು ಎಂಆರ್‍ಡಬ್ಲ್ಯೂಗಳಿಗೆ ತರಬೇತಿ ಕಾರ್ಯಕ್ರಮ ನಡೆಸಲು ವಿಕಲಚೇತನರ ಇಲಾಖೆ ಸಿದ್ಧವಾಗಿದೆ ಎಂದು ವೈಶಾಲಿ ಹೇಳಿದರು.

ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಂಧ್ಯಾ ಅವರು ಮಾತನಾಡಿ, ಸೊನ್ನೆ ಇಂದ ಹದಿನೆಂಟು ವರ್ಷದೊಳಗಿನ ವಿಕಲಚೇತನ ಮಕ್ಕಳಿಗೆ ಆರೈಕೆ, ಪೂರೈಕೆ ಮತ್ತು ಅವರ ಪಾಲಕ, ಪೋಷಕರು ಎದುರಿಸುವ ಸಮಸ್ಯೆಗಳನ್ನು ಚರ್ಚಿಸಿ ಆತ್ಮಸ್ತೈರ್ಯ ತುಂಬುವಂತಹ ಕೆಲಸ ಆಗಬೇಕಾಗಿದೆ. ಆದ್ದರಿಂದ ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಆಯಾಯ ಜಿಲ್ಲೆಗಳಲ್ಲಿ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಸೇರಿಕೊಂಡು ವಿಕಲಚೇತನರ ಆರೈಕೆದಾರರ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

 

ಸ್ಪೂರ್ತಿ ವಿಕಲಚೇತನರ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ಅವರು ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ವಿಕಲಚೇತನರು ಸಮಸ್ಯೆಗಳು ಸಾಲುಸಾಲುಗಳಿಗೆ ಆಧಾರಕಾರ್ಡ್, ಯುಡಿಐಡಿ ಕಾರ್ಡ್, ನಿವೇಶನ, ಶಿಕ್ಷಣ ಮತ್ತು ನೈಜ ವಿಕಲಚೇತನರಿಗೆ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳು ಸಿಗದೇ ಇರುವುದು ವಿಷಾದಕರ ಎಂದರು.

ವಿಕಲಚೇತನರು ಓಡಾಡಲು ರೈಲ್ವೇ ಮತ್ತು ಬಸ್ ಪಾಸ್‍ಗಳ ತುರ್ತು ಅಗತ್ಯವಿದ್ದು, ಅವುಗಳನ್ನು ಮಾಡಿಕೊಡುವಲ್ಲಿ ಅಧಿಕಾರಿಗಳು ಅನಗತ್ಯ ವಿಳಂಬ ನೀತಿಯನ್ನು ಅನುಸರಿಸಿ ವಿಕಲಚೇತನರಿಗೆ ಓಡಾಡಿಸುವುದನ್ನು ನೋಡಿದರೆ ನಮ್ಮ ಅಧಿಕಾರಿಗಳ ಧೋರಣೆಗಳು ಅರ್ಥವಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆಯ ಅಧ್ಯಕ್ಷ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ, ವಿಕಲಚೇತನರಿಗೆ ಸರ್ಕಾರಿ ಸೌಲಭ್ಯಗಳನ್ನು ಕೊಡುವಾಗ ಯಾವುದೇ ಹಿಂಜರಿಕೆ ಇಲ್ಲದೇ ಕೊಡಬೇಕಾದಂತಹ ಜವಬ್ದಾರಿ ಅಧಿಕಾರಿಗಳ ಮೇಲಿದೆ.

ಸೊನ್ನೆ ಇಂದ ಹದಿನೆಂಟು ವರ್ಷದೊಳಗಿನ ಮಕ್ಕಳಿಗೆ ಫಿಜಿಯೋತೆರಫಿ ಸೆಂಟರ್‍ಗಳ ಅಗತ್ಯವಿದ್ದು, ಸರ್ಕಾರ ಪ್ರತಿ ಜಿಲ್ಲೆ, ತಾಲ್ಲೂಕು ಮತ್ತು ಹೋಬಳಿ ಮಟ್ಟಕ್ಕೆ ಅಗತ್ಯಕ್ಕೆ ಅನುಗುಣವಾಗಿ ಫಿಜಿಯೋತೆರಫಿ ಸೆಂಟರ್‍ಗಳನ್ನು ಆರಂಭಿಸಬೇಕೆಂದು ಒತ್ತಾಯಿಸಿದರು. ಕಾರ್ಯಗಾರದಲ್ಲಿ ಸಂತ ಜಾನರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಡಾ.ರಂಜಿತ, ಮೋಹನಕುಮಾರಿ, ಪ್ರಶಾಂತ್ ಸೇರಿದಂತೆ, ಮುಂತಾದವರು ಹಾಜರಿದ್ದರು.

Share This Article
Enable Notifications OK No thanks