ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ಜಾತ್ರೋತ್ಸವವು ವಿಜೃಂಭಣೆಯಿಂದ ಜರುಗುತ್ತಿದೆ.ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಡ್ರೋನ್ ಮೂಲಕವೂ ನಿಗಾ ವಹಿಸಲಾಗುತ್ತಿದೆ. ಆದರೂ ಪುಂಡರ ದಾಳಿಗೆ ಜನ ಆತಂಕಗೊಂಡಿದ್ದಾರೆ.
ದಾವಣಗೆರೆ ನಗರದ ದುರ್ಗಾಂಭಿಕಾ ದೇವಿ ದೇವಸ್ಥಾನದಲ್ಲಿ ನಡೆದ ಜಾತ್ರೆಯಲ್ಲಿ ಕಿಡಿಗೇಡಿಗಳು ಕೆಟ್ಟ ಕಾರ್ಯ ಎಸಗಿದ್ದಾರೆ.ಜಾತ್ರೆಯಲ್ಲಿ ಬಲಿ ನೀಡಿದ ಪ್ರಾಣಿಗಳ ಕಾಲುಗಳಿಂದ ಕೆಲವು ಜನರಿಗೆ ಹಲ್ಲೆ ಮಾಡಿದ್ದು, ಜನರು ಆಘಾತಗೊಂಡು ಸ್ಥಳದಿಂದ ಓಡಾಡುವ ಸ್ಥಿತಿ ನಿರ್ಮಾಣವಾಯಿತು. ಸ್ಥಳೀಯರು, ದೇವಸ್ಥಾನದ ಸಿಬ್ಬಂದಿ ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಾತ್ರೆ ಸಂಭ್ರಮದ ನಡುವೆ ಏಕಾಏಕಿ ಗುಂಪಾಗಿ ಬಂದ ಕೆಲ ಯುವಕರು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದಾರೆ.ಹಲ್ಲೆಯಿಂದ ತಪ್ಪಿಸಿಕೊಳ್ಳಲು ಜನರು ಓಡಾಡುತ್ತಿದ್ದ ದೃಶ್ಯಗಳು ಕಂಡುಬಂದಿವೆ. ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಭಕ್ತರ ಭಯಭೀತ ಓಡುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



