ಬೆಂಗಳೂರು: ನಿಮಗೆಲ್ಲಾ ನೆನಪಿರಬಹುದು. ಕನ್ನಡ ಭಾಷೆಯನ್ನ ಗೂಗಲ್ ಕೆಳಮಟ್ಟದಲ್ಲಿ ತೋರಿಸಿತ್ತು. ಅಂದ್ರೆ ಭಾರತ ಕುರೂಪಿ ಭಾಷೆ ಯಾವುದು ಅಂದ್ರೆ ಕನ್ನಡ ಅಂತ ತೋರಿಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಹೀಗಾಗಿನೇ ಗೂಗಲ್ ವಿರುದ್ಧ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಈ ಸಂಬಂಧ ಅರ್ಜಿದಾರರೊಬ್ಬ ಹೈಕೋರ್ಟ್ ಗೆ ಮನವಿಯನ್ನು ಮಾಡಿದ್ರು. ಗೂಗಲ್ ಕನ್ನಡದ ಬಗ್ಗೆ ಅವಹೇಳನಕಾರಿಯಾಗಿ ತೋರಿಸಿದ್ದನ್ನು ಪತ್ರಿಕಾ ಪ್ರಕಟಣೆಯ ಸಮೇತ ತೋರಿಸಲಾಗಿತ್ತು. ಇಂದು ಅದರ ವಿಚಾರಣೆಯಲ್ಲಿ ಗೂಗಲ್ ಹೈಕೋರ್ಟ್ ಬಳಿ ಕ್ಷಮೆ ಕೋರಿದೆ.
ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರಿದ್ದ ವಿಭಾಗೀಯ ನ್ಯಾಯಪೀಠವು ಗೂಗಲ್ಗೆ ಕ್ಷಮೆ ನೀಡಿದೆ. ಇನ್ನು ಗೂಗಲ್ ಕೂಡ ಮುಂದೆ ಈ ರೀತಿ ತಪ್ಪಾಗಲ್ಲ ಅಂತ ಭರವಸೆ ನೀಡಿದೆ.