ಚಿತ್ರದುರ್ಗ.ಸೆ.02 : ಉತ್ತಮ ಪೋಷಣೆ ಆರೋಗ್ಯಕರ ಜೀವನಕ್ಕೆ ಅಡಿಪಾಯವಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಹೊಸಕಲ್ಲಹಳ್ಳಿ ಗ್ರಾಮದ ಅಂಗನವಾಡಿ ಬಳಿ ಇರುವ ಶ್ರೀ ರಾಮ ದೇವಸ್ಥಾನದ ಆವರಣದಲ್ಲಿ ಸೋಮವಾರ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ರಾಷ್ಟಿçÃಯ ಪೌಷ್ಟಿಕಾಂಶ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು
ರಾಷ್ಟಿçÃಯ ಪೋಷಣೆ ಸಪ್ತಾಹ-2024 ಅನ್ನು ಇದೇ ಸೆಪ್ಟೆಂಬರ್ 1 ರಿಂದ 7 ರವರೆಗೆ ಆಚರಿಸಲಾಗುತ್ತದೆ. ಸಮತೋಲಿತ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಪ್ರಾಮುಖ್ಯತೆಯನ್ನು ಉತ್ತೇಜಿಸಲು ಈ ಬಾರಿ ಪೌಷ್ಟಿಕಾಂಶದ ಅಗತ್ಯತೆಗಳ ಬಗ್ಗೆ ಜಾಗೃತಿ ಹಾಗೂ ಎಲ್ಲಾ ವಯಸ್ಸಿನ ವ್ಯಕ್ತಿಗಳಲ್ಲಿ ಆರೋಗ್ಯಕರ ಆಹಾರ ಪದ್ಧತಿ ಪ್ರೋತ್ಸಾಹಿಸುಸುತ್ತದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ಮಾತನಾಡಿ, ಪ್ರತಿ ವರ್ಷ ರಾಷ್ಟಿçÃಯ ಪೌಷ್ಟಿಕಾಂಶ ವಾರಕ್ಕೆ ನಿರ್ದಿಷ್ಟ ಥೀಮ್ ಆಯ್ಕೆ ಮಾಡಲಾಗುತ್ತದೆ. ಈ ಥೀಮ್ ಪ್ರಮುಖ ಪೌಷ್ಟಿಕಾಂಶದ ವಿಷಯಗಳ ಕುರಿತು ಚರ್ಚೆಗಳು ಮತ್ತು ಯೋಜನೆಗಳಿಗೆ ಮಾರ್ಗದರ್ಶನ ನೀಡುತ್ತದೆ. ಈ ವರ್ಷದ ಥೀಮ್ “ಎಲ್ಲರಿಗೂ ಪೌಷ್ಟಿಕ ಆಹಾರಗಳು, ಸುಸ್ಥಿರ ಅಭಿವೃದ್ಧಿಗಾಗಿ ವಿಶ್ವಸಂಸ್ಥೆಯ ಗುರಿಗಳನ್ನು ಬೆಂಬಲಿಸುತ್ತದೆ. ಇದು ಜೀವನದ ಎಲ್ಲಾ ಹಂತಗಳಲ್ಲಿ ಜನರ ಪೌಷ್ಟಿಕಾಂಶದ ಅಗತ್ಯ ಪೂರೈಸುವ ಆಹಾರಕ್ರಮ ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಎಂದರು.
ಜಿಲ್ಲಾ ಪೋಷಣ್ ವಿಭಾಗದ ವ್ಯವಸ್ಥಾಪಕ ಕರಕಪ್ಪ ಮೇಟಿ ಮಾತನಾಡಿ, ಆರೋಗ್ಯಕರ ಜೀವನಕ್ಕಾಗಿ ನಿತ್ಯ ಆಹಾರ ಕ್ರಮದಲ್ಲಿ ಫೋಲಿಕ್ ಆಮ್ಲ ಮತ್ತು ಕಬ್ಬಿಣಾಂಶ ಹೆಚ್ಚು ಇರುವ ಆಹಾರ ಸೇವನೆ ರಕ್ತಹೀನತೆ ತಪ್ಪಿಸುತ್ತದೆ ಎಂದರು.
ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಮನುಜಾ ಮಾತನಾಡಿ, ಬಾಲ್ಯ ವಿವಾಹ ಮಾಡಬೇಡಿ ಬಾಲ ಗರ್ಭಿಣಿಯರಿಗೆ ಉಂಟಾಗುವ ತಾಯಿ ಮರಣ, ಶಿಶು ಮರಣದ ಬಗ್ಗೆ ತಿಳಿಸಿ ಬಾಲ್ಯ ವಿವಾಹ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.
ಶಾಲಾ ಮಕ್ಕಳ ಪೋಷಣೆಗಾಗಿ ಕೆನೆ ಹಾಲು, ಮಧ್ಯಾಹ್ನದ ಬಿಸಿ ಊಟ, ವಾರಕ್ಕೊಮ್ಮೆ ಕಬ್ಬಿಣಾಂಶ ಮಾತ್ರೆ ನುಂಗಿಸುವ ಕಾರ್ಯಕ್ರಮ ಸರ್ಕಾರ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಸಿ.ಆರ್.ಪಿ ಮಲ್ಲಿಕಾ, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಿಕ್ಷಕರಾದ ಶಶಿಕಲಾ, ಮಂಜುಳಾ, ಆಶಾ ಕಾರ್ಯಕರ್ತೆ ಪಾರ್ವತಮ್ಮ, ಹಿರಿಯ ನಾಗರಿಕ ಈರಪ್ಪ, ತಾಯಂದಿರ ಅತ್ತೆಯರು, ಹದಿಹರೆಯದ ಕಿಶೋರ ಕಿಶೋರಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು.