ಬೆಂಗಳೂರು: ಕಳೆದ ಕೆಲವು ತಿಂಗಳಿನಿಂದ ಹಾಲಿನ ಬೆಲೆ ಏರಿಕೆ ಜನ ಸುಸ್ತಾಗಿ ಹೋಗಿದ್ರು. ಯಾವಾಗ್ಲೆ ಸುದ್ದಿ ಬಂದ್ರು ಅದು ಏರಿಕೆಯ ಸುದ್ದಿಯೇ ಆಗಿರ್ತಾ ಇತ್ತು. ಆದರೆ ಇದೀಗ ಕೆಎಂಎಫ್ ಸಂತಸದ ಸುದ್ದಿಯೊಂದನ್ನ ನೀಡಿದೆ. ಹಾಲಿನ ದರದಲ್ಲಿ ಇಳಿಕೆ ಮಾಡಿದೆ. ಇನ್ಮುಂದೆ 160 ML ಹಾಲು 10 ರೂಪಾಯಿಗೇನೆ ಸಿಗಲಿದೆ.
ನಂದಿನಿ ಬ್ರ್ಯಾಂಡ್ ನ ಹಾಲು ಹಾಗೂ ಮೊಸರು ಈಗ 10 ರೂಪಾಯಿಗೇನೆ ಸಿಗುತ್ತಾ ಇದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಾಲಿನ ಸಣ್ಣ ಸಣ್ಣ ಪ್ಯಾಕೆಟ್ ಗಳನ್ನು ಬಿಡುಗಡೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕ ಸ್ನೇಹಿ ಕ್ರಮಕ್ಕೆ ಮುಂದಾಗಿದೆ. ಈ ನೂತನ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಂಕೇತಿಕವಾಗಿ ಲೋಕಾರ್ಪಣೆಗೊಳಿಸಿದ್ದಾರೆ. ಈ ಮೊದಲು ಮಾರುಕಟ್ಟೆಯಲ್ಲಿ ಕನಿಷ್ಠ 200 ಎಂಎಲ್ ಹಾಲಿನ ಪ್ಯಾಕೆಟ್ ಗಳು ಲಭ್ಯವಿದ್ದವು. 13 ರೂಪಾಯಿ ಕೊಡಬೇಕಾಗಿತ್ತು. ಇದೋಗ ಗ್ರಾಹಕರ ಅನುಕೂಲಕ್ಕಾಗಿ 160 ML ಪಾಕೆಟ್ ಗಳನ್ನು ಪರಿಚಯ ಮಾಡುತ್ತಿದೆ. ಅದು ಕೇವಲ 10 ರೂಪಾಯಿಗೆ. ನಂದಿನಿ ಮೊಸರು 140 ML ಇದ್ದು ಅದು ಕೂಡ 10 ರೂಪಾಯಿಗೆ ಸಿಗಲಿದೆ.
ಕೆಎಂಎಫ್ ಈ ನಿರ್ಧಾರದಿಂದ ನಗರ ಪ್ರದೇಶದಲ್ಲಿ ವಾಸಿಸುವ ಬ್ಯಾಚುಲರ್ ಗಳಿಗೆ, ಪ್ರವಾಸ ಮಾಡುವವರಿಗೆ ಅನುಕೂಲವಾಗಲಿದೆ. ದೊಡ್ಡ ಪ್ಯಾಕೆಟ್ ಖರೀದಿಸಿ ಹಾಲು ಅಥವಾ ಮೊಸರು ವ್ಯರ್ಥವಾಗುವುದನ್ನು ಈ ಸಣ್ಣ ಪ್ಯಾಕೆಟ್ ಗಳು ತಡೆಯುತ್ತವೆ. ಮುಂದಿನ ಕೆಲವೇ ದಿನಗಳಲ್ಲಿ ರಾಜ್ಯಾದ್ಯಂತ ಇರುವ ಎಲ್ಲಾ ನಂದಿನಿ ಪಾರ್ಲರ್ ಗಳು ಮತ್ತು ಚಿಲ್ಲದೆ ಮಾರಾಟ ಮಳಿಗೆಗಳಲ್ಲಿ ಈ 10 ರೂಪಾಯಿ ಬೆಲೆಯ ಹಾಲು ಮತ್ತು ಮೊಸರಿನ ಪ್ಯಾಕೆಟ್ ಗಳು ಗ್ರಾಹಕರಿಗೆ ಸಿಗಲಿವೆ.






