ಬಳ್ಳಾರಿ; ಜಿಲ್ಲೆಯ ಸುತ್ತಮುತ್ತ ಕೆಲಸ ಹುಡುಕುತ್ತಿರುವವರಿಗೆ ಇಲ್ಲಿದೆ ಗುಡ್ ನ್ಯೂಸ್. ವಸತಿ ಶಾಲೆಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಏಪ್ರಿಲ್ 11 ರಂದು ನೇರ ಸಂದರ್ಶನ ಏರ್ಪಡಿಸಲಾಗಿದೆ. ಆಸಕ್ತರು ನಾಳೆಯೇ ಸಂದರ್ಶನದಲ್ಲಿ ಭಾಗಿಯಾಗಬಹುದು. 21 ರಿಂದ 60 ವರ್ಷ ವಯಮಿತಿ ಇರುವವರು ಸಂದರ್ಶನದಲ್ಲಿ ಹಾಜರಾಗಬಹುದಾಗಿದೆ. ಬಳ್ಳಾರಿ ತಾಲೂಕಿನ ಕೊಳಗಲ್ಲಿನ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 2025-26ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ವಾಕ್ ಇನ್ ಸಂದರ್ಶನ ಏರ್ಪಡಿಸಲಾಗಿದೆ. ಅರ್ಹ ಮತ್ತು ಅನುಭವವುಳ್ಳ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗಿಯಾಗಬಹುದು.
ನವೋದಯ ಅಥವಾ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಪನ್ಯಾಸ ಮಾಡಿದ ಅನುಭವ ಇರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ವಾಕ್ ಇನ್ ಸಂದರ್ಶನ ಏರ್ಪಡಿಸಲಾಗಿದೆ. ಈ ಹುದ್ದೆಗಳು ತಾತ್ಕಾಲಿಕವಾಗಿರುತ್ತವೆ ಎಂಬುದು ಗಮನಾರ್ಹವಾದ ವಿಚಾರ. ಸಂದರ್ಶನಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ಶೈಕ್ಷಣಿಕ ದಾಖಲೆಗಳೊಂದಿಗೆ ಹಾಜರಾಗಬೇಕು. ಹಾಗೇ ಸಂದರ್ಶನದ ಸಮಯದಲ್ಲಿ ಬಂದಂತ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಭತ್ಯೆ ಇರುವುದಿಲ್ಲ.
ಕನ್ನಡ ಶಿಕ್ಷಕ 1, ಜೀವಶಾಸ್ತ್ರ ಶಿಕ್ಷಕ 1, ಇಂಗ್ಲೀಷ್ ಭಾಷೆಯಲ್ಲಿ ತರಬೇತಿ ಪಡೆದ ಶಿಕ್ಷಕ 1, ಕನ್ನಡದಲ್ಲಿ ತರಬೇತಿ ಪಡೆದ ಪದವೀಧರ ಶಿಕ್ಷಕರು 2, ದೈಹಿಕ ಶಿಕ್ಷಕರು (ಪುರುಷ ಮತ್ತು ಮಹಿಳೆ) 1+ 1 ಮತ್ತು ಹಾಸ್ಟೆಲ್ ವಾರ್ಡನ್ 1 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ವಿದ್ಯಾರ್ಹತೆ ಮತ್ತು ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ನಗರದ ವಾಲ್ಮೀಕಿ ಭವನದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 08392-242453 ಸಂಪರ್ಕಿಸಿ.






