Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡಗೆ ಗುಡ್ ನ್ಯೂಸ್..!

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿರುವ ಪವಿತ್ರಾ ಗೌಡಗೆ ಕೋರ್ಟ್ ಗುಡ್ ನ್ಯೂಸ್ ನೀಡಿದೆ. ಇಷ್ಟು ದಿನ ಜೈಲಲ್ಲಿ ಏನು ಕೊಡ್ತಾರೋ ಅದೇ ಊಟವನ್ನ ತಿನ್ನಬೇಕಿತ್ತು. ವಾರದ ಏಳು ದಿನವೂ. ಆದರೆ ವಾರದಲ್ಲಿ ಒಂದು ದಿನ ತಮಗಿಷ್ಟವಾದ ಮನೆ ಊಟ ತಿನ್ನಲು ಅನುಮತಿ ನೀಡಿದೆ. ಇದು ಪವಿತ್ರಾ ಗೌಡಗೆ ಕೊಂಚ ಸಮಾಧಾನ ನೀಡಿದೆ. ಇನ್ಮೇಲೆ ಪ್ರತಿ ವಾರ ಅಮ್ಮನ ಕೈ ರುಚಿ, ತನಗಿಷ್ಟವಾದ ಊಟವನ್ನ ಪವಿತ್ರಾ ಗೌಡ ತಿನ್ನಬಹುದು.

ಮನೆಯೂಟ ಬೇಕೆಂದು ಪವಿತ್ರಾ ಗೌಡ ಕೋರ್ಟ್ ಮೊರೆ ಹೋಗಿದ್ದರು. ಈ ಸಂಬಂಧ ಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಿದ್ದು, ಮನೆ ಊಟ ನೀಡಲು ಅವಕಾಶ ನೀಡಿದೆ. ಅನಾರೋಗ್ಯದ ಸಮಸ್ಯೆ ಉಂಟಾದಲ್ಲಿ ವೈದ್ಯರ ಸಲಹೆ ಮೇರೆಗೆ ಊಟ ನೀಡಲು ಸೂಚನೆ ನೀಡಿದೆ.

ಪವಿತ್ರಾ ಗೌಡ, ಲಕ್ಷ್ಮಣ್, ನಾಗರಾಜ್ ಈ ಹಿಂದೆ ಮನೆಯೂಟಬೇಕೆಂದು ಅರ್ಜಿ ಸಲ್ಲಿಕೆ ಮಾಡಿದ್ದರು. ಕೋರ್ಟ್ ಮೂವರು ಆರೋಪಿಗಳಿಗೆ ದಿನಕ್ಕೆ ಒಂದು ಬಾರಿ ಮನೆಯೂಟ ನೀಡುವುದಕ್ಕೆ ಅವಕಾಶವನ್ನು ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಯಾಕಂದ್ರೆ ಪವಿತ್ರಾ ಗೌಡ ಸೇರಿದಂತೆ ಮೂವರಿಗೆ ಮಬೆ ಊಟ ನೀಡಿದರೆ, ಉಳಿದ ಆರೋಪಿಗಳು ಅದೇ ಬೇಕು ಎಂದು ಕೇಳಿದರೆ ಜೈಲಲ್ಲಿರುವ ಸಿಬ್ಬಂದಿಗೆ ಕಷ್ಟವಾಗುತ್ತದೆ. ಅದಕ್ಕೆಂದು ಪ್ರತ್ಯೇಕ ತಂಡವನ್ನ ರಚನೆ ಮಾಡಬೇಕಾಗುತ್ತದೆ. ಹೀಗಾಗಿ ಮನೆ ಊಟಕ್ಕೆ ಅವಕಾಶ ನೀಡಬಾರದು ಎಂದು ಹೇಳಿತ್ತು. ಆದರೆ ಪವಿತ್ರಾ ಗೌಡ ಪರ ವಕೀಲರು, ಜೈಲೂಟದಿಂದ ಫುಡ್ ಪಾಯಿಸನ್ ಆಗಿದೆ, ಚರ್ಮಕ್ಕೆ ಸಮಸ್ಯೆಯಾಗಿದೆ ಅಂತೆಲ್ಲಾ ಕಾರಣಗಳನ್ನ ನೀಡಿದ್ದರು. ಇದೀಗ ಕೋರ್ಟ್ ವಾರಕ್ಕೆ ಒಮ್ಮೆ ಮನೆಯೂಟ ನೀಡುವುದಕ್ಕೆ ಅವಕಾಶ ನೀಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now