ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಕೇಂದ್ರ ಸರ್ಕಾರದ ನೌಕರರು ತುಟ್ಟಿಭತ್ಯೆ ಹೆಚ್ಚಳಕ್ಕಾಗಿ ಕಾಯುತ್ತಿದ್ದಾರೆ. ಈ ಬಾರಿ ನಿರೀಕ್ಷೆಗಿಂತ ಹೆಚ್ಚಿನ ಸಂಬಳ ಸಿಗುವ ನಿರೀಕ್ಷೆ ಇದೆ. ದಸರಾ ಮತ್ತು ದೀಪಾವಳಿ ನಡುವೆ ಈ ನಿರ್ಧಾರ ಹೊರ ಬೀಳಲಿದೆ.
ಶೇಕಡಾ 3ರಷ್ಟು ಹೆಚ್ಚಳದ ನಿರೀಕ್ಷೆಯನ್ನು ಕೇಂದ್ರ ಸರ್ಕಾರಿ ನೌಕರರು ಮಾಡಿದ್ದಾರೆ. ಆದರೆ ಕೈಗಾರಿಕಾ ಕಾರ್ಮಿಕರ ಗ್ರಾಹಕ ಸೂಚ್ಯಂಕ ಬೆಲೆಯನ್ನು ಆಧರಿಸಿ ಇತ್ತಿಚಿನ ಲೆಕ್ಕಾಚಾರಗಳು ಶೇಕಡ 4 ರಷ್ಟು ಡಿಎ ಹೆಚ್ಚಳ ಮಾಡಲಾಗುತ್ತದೆ. ಇದು ನೌಕರರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
ಕೇಂದ್ರ ಸರ್ಕಾರ ನೌಕರರ ಸಂಬಳ ಹೆಚ್ಚಳ ದೇಶದಲ್ಲಿನ ಹಣದುಬ್ಬರ ಆಧರಿಸಿ ಮಾಡಲಾಗುತ್ತದೆ. ಹಣದುಬ್ಬರ ಏರಿಕೆಯಾದಷ್ಟು, ನೌಕರರ ಸಂಬಳದಲ್ಲಿಯೂ ಏರಿಕೆ ಕಾಣಲಿದೆ. ಹೀಗಾಗಿ ಈ ಬಾರಿ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 4ರಷ್ಟು ಹೆಚ್ಚಳದ ನಿರೀಕ್ಷೆ ಇದೆ.