ಬೆಂಗಳೂರು: ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾಕಷ್ಟು ಬಾರಿ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಇದೀಗ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ. ಸಂಕ್ರಾಂತಿ ಹಬ್ಬದಂದು ವಿಶೇಷ ಸುದ್ದಿ ನೀಡಿದ್ದಾರೆ.
ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಿ, ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದ್ದಾರೆ. 11 ಸಾವಿರವಿದ್ದ ವೇತನವನ್ನ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ವಿದ್ಯಾರ್ಥಿ ವೇತನ ಇದ್ದವರಿಗೆ 32 ಸಾವಿರ ಮಾಡಲಾಗಿದೆ. ಇನ್ನು ಫುಲ್ ಟೈಮ್ ವರ್ಕ್ ನೀಡುವುದಾಗಿಯೂ ಭರವಸೆ ನೀಡಿದ್ದಾರೆ.
ಅತಿಥಿ ಉಪನ್ಯಾಸಕರು ಅನೇಕ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಬಗ್ಗೆ ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ರು. ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು. ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಸಿಎಂ ಗಮನಿಸಿ ವರದಿಯನ್ನ ಅನುಷ್ಠಾನ ಮಾಡಲು ಸಿಎಂ ಒಪ್ಪಿದ್ದಾರೆ. 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸದ ಯುಜಿಸಿ ಕ್ವಾಲಿಫಿಕೇಶನ್ ಇರೋ ಅತಿಥಿ ಉಪನ್ಯಾಸಕರಿಗೆ 30 ಸಾವಿರ, 5 ವರ್ಷ ಸೇವೆ ಹೆಚ್ಚು ಸೇವೆ ಸಲ್ಲಿಸಿದ ಯುಜಿಸಿ ಕ್ವಾಲಿಫಿಕೇನ್ ಇಲ್ಲದವರಿಗೆ 28 ಸಾವಿರ, 5 ವರ್ಷ ಸೇವೆ ಇಲ್ಲದ ಯುಜಿಸಿ ಕ್ವಾಲಿಫಿಕೇಶನ್ ಇಲ್ಲದವರಿಗೆ 26 ಸಾವಿರ ಸಂಬಳ ನೀಡ್ತೀವಿ. ಪ್ರತಿ ತಿಂಗಳು 10 ರಂದು ಸಂಬಳ ಕೊಡ್ತೀವಿ ಎಂಬ ಭರವಸೆಯನ್ನ ಸಚಿವರು ನೀಡಿದ್ದಾರೆ. ಇದು ಸಂಕ್ರಾಂತಿಯ ಖುಷಿಯ ವಿಚಾರವೇ. ಅತಿಥಿ ಉಪನ್ಯಾಸಕರು ಖುಷಿ ದುಪ್ಪಟ್ಟಾಗಿದೆ.