ರೈತರಿಗೆ ಗುಡ್ ನ್ಯೂಸ್ ; ಮುಂಗಾರು ಯಾವಾಗಿಂದ ಆರಂಭ..? ಮಳೆಯ ಅಪ್ಡೇಟ್ ಇಲ್ಲಿದೆ

1 Min Read

 

ಬೆಂಗಳೂರು; ಮಳೆಗಾಲ ಶುರುವಾಯ್ತು ಅಂದ್ರೆ ರೈತರಿಗೆ ಇನ್ನಿಲ್ಲದ ಖುಷಿ ಸಿಗುತ್ತೆ. ಅದರಲ್ಲೂ ಮುಂಗಾರು ಮಳೆ ಆರಂಭವಾಗುವುದನ್ನೇ ಕಾಯುತ್ತಾ ಇರುತ್ತಾರೆ. ಇದೀಗ ಈ ವರ್ಷದ ಮುಂಗಾರು ಮಳೆಯ ಆರಂಭದ ಬಗ್ಗೆ ಹವಮಾನ ಇಲಾಖೆ ಸೂಚನೆ ನೀಡಿದೆ. ಮತ್ತೊಂದು ಖುಷಿಯ ವಿಚಾರ ಅಂದ್ರೆ ಹಿಂದಿನ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಜಾಸ್ತಿ ಇರಲಿದೆ.

ಮುಂಗಾರು ಮಳೆ ಶೀಘ್ರವೇ ಆರಂಭವಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ನೈರುತ್ಯ ಮುಂಗಾರು ಸಾಮಾನ್ಯವಾಗಿ ಜೂನ್ 1ರ ಬಳಿಕ ಕೇರಳಕ್ಕೆ ಆಗಮಿಸುತ್ತಿತ್ತು. ಈ ಬಾರಿ ನಾಲ್ಕು ದಿನ ಮುಂಚಿತವಾಗಿಯೇ ಕೇರಳದಲ್ಲಿ ಮುಂಗಾರು ಆರಂಭವಾಗಲಿದೆ. ಅಂದ್ರೆ ಮೇ 27ರಿಂದಾನೇ ಮುಂಗಾರು ಮಳೆ ಆರಂಭವಾಗಲಿದೆ. ಅಂದ್ರೆ 16 ವರ್ಷಗಳ ಬಳಿಕ ಮುಂಗಾರು ಮಳೆ ಇಷ್ಟು ಬೇಗ ಆರಂಭವಾಗ್ತಾ ಇರೋದು.

ಇನ್ನು ಕರ್ನಾಟಕಕ್ಕೆ ಈ ಬಾರಿ ಮೇ 30 ಅಥವಾ 31ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅಂದರೆ ರಾಜ್ಯಕ್ಕೆ ಸಾಮಾನ್ಯ ದಿನಗಳಿಗಿಂತ 5 ರಿಂದ 6 ದಿನ ಮುಂಚಿತವಾಗಿ ಆಗಮನವಾಗುವ ಸಾಧ್ಯತೆ ಇದೆ. ಕಳೆದ ವರ್ಷ ಅಂದ್ರೆ 2024ರಲ್ಲಿ ಕರ್ನಾಟಕದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಅದ್ಭುತವಾಗಿ ಸುರಿದಿತ್ತು. ಈ ವರ್ಷವೂ ಉತ್ತಮ ಮಳೆಯಾಗಲಿದೆ. ಇನ್ನು ಈ ವರ್ಷ ಬೇಸಿಗೆಯಲ್ಲಿಯೇ ಒಂದಷ್ಟು ಮಳೆ ಶುರುವಾಗಿತ್ತು. ಇನ್ಮೇಲೆ ಮುಂಗಾರು ಮಳೆಯೇ ಆರಂಭವಾಗಲಿದೆ. ಮೇ 12ರವರೆಗೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ನಗರ, ಕೋಲಾರ, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ದಾವಣಗೆರೆ ಸೇರಿದಂತೆ ಹಲವೆಡೆ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಸೂಚನೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *