ಬೆಂಗಳೂರು; ಇಂದು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ 50ನೇ ಹುಟ್ಟುಹಬ್ಬ. ಕುಟುಂಬಸ್ಥರು, ಆಪ್ತರು, ಅಭಿಮಾನಿಗಳೆಲ್ಲಾ ಸಮಾಧಿ ಬಳಿ ಹೋಗಿ ಪೂಜೆ ಸಲ್ಲಿಸಿದರು. ಇಂದು ಎಲ್ಲರಿಗೂ ಶುಭದಿನ. ಈ ಶುಭ ಸಂದರ್ಭದಲ್ಲಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ವಿಶೇಷವಾದದ್ದೇನೋ ಮಾಡುವುದಕ್ಕೆ ಹೊರಟಿದ್ದಾರೆ. ಅದರಲ್ಲೂ ಈ ಐಡಿಯಾ ದೇಶದಲ್ಲಿಯೇ ಇದೆ ಮೊದಲು. ಹಾಗಾದ್ರೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾಡುವುದಕ್ಕೆ ಹೊರಟಿರೋದು ಏನು..? ಎಂಬ ಮಾಹಿತಿ ಇಲ್ಲಿದೆ.

ತಾವೇನು ಮಾಡುವುದಕ್ಕೆ ಹೊರಟಿದ್ದೇವೆ ಎಂಬುದನ್ನು ತಿಳಿಸಿರುವ ಅಶ್ವಿನಿ ಪುನೀತ್ ರಾಜ್‍ಕುಮಾರ್, ನೀವೆಲ್ಲರೂ ನಮ್ಮ ಮೇಲೆ ಇಟ್ಟಿರುವ ನಂಬಿಕೆ, ಪ್ರೀತಿ, ಗೌರವವೇ ಅಪ್ಪು ನಮ್ಮ ಜೊತೆಗೆ ಇನ್ನೂ ಇದ್ದಾರೆ ಎಂಬುದಕ್ಕೆ ಸಾಕ್ಷಿ. ನಿಮ್ಮೆಲ್ಲರ ನಗುವಿನಲ್ಲಿಯೇ ನಾನು ಅಪ್ಪು ಅವರನ್ನು ಕಾಣುತ್ತಿದ್ದೇನೆ. ಪ್ರತಿದಿನವೂ ಅಪ್ಪು ಅವರನ್ನು ಸೆಲೆಬ್ರೇಟ್ ಮಾಡುವ ಆಸೆ. ಪ್ರತಿಕ್ಷಣ ಅಪ್ಪು ಅವರನ್ನು ನೋಡುವ ಆಸೆ. ಮರೆಯಾದರೂ ಮರೆಯಲು ಸಾಧ್ಯವಿಲ್ಲ. ನಿಮ್ಮ ನಗುವಿನ ಒಡೆಯನನ್ನು ಪ್ರತಿದಿನ ನೋಡಲು ನಿಮಗಾಗಿ ಕಾದಿದೆ ಒಂದು ಗುಡ್ ನ್ಯೂಸ್. ಅಪ್ಪು ಹೆಸರಲ್ಲಿ ಒಂದು ದಿಟ್ಟ ಹೆಜ್ಜೆ. ಅದುವೆ PRKstarfandom App. ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ ಎಂದಿದ್ದಾರೆ.

ಅಷ್ಟಕ್ಕೂ ಈ PRKstarfandom App ಎಂದರೆ ಏನು, ಅದು ಹೇಗೆ ವರ್ಕ್ ಆಗುತ್ತೆ ಗೊತ್ತಾ..? ಈ ಆಪ್ ನಲ್ಲಿ ಅಪ್ಪು ಅವರಿಗೆ ಸಂಬಂಧಿಸಿದ ಎಲ್ಲಾ ವಿವರಗಳು ಲಭ್ಯವಿರಲಿವೆ. ಅಪ್ಪು ಅವರ ಸಿನಿಮಾ, ಸಾಂಗ್ಸ್, ಡ್ಯಾನ್ಸ್, ಭಾಷಣ, ಅವರ ಬಗೆಗಿನ ಸ್ಪೆಷಲ್ ಮಾಹಿತಿ ಇದರಲ್ಲಿ ಸಿಗಲಿದೆ. ಅಪ್ಪು ಬಗ್ಗೆ ಈ ಆಪ್ ಮೂಲಕ ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದಾಗಿದೆ.

