ಯೋಗದಿಂದ ಮಾತ್ರ ಉತ್ತಮ ಆರೋಗ್ಯ, ಹಣ,  ಐಶ್ವರ್ಯದಿಂದಲ್ಲ : ಶಾಸಕ ಟಿ.ರಘುಮೂರ್ತಿ

suddionenews
1 Min Read

ಚಳ್ಳಕೆರೆ: ಯೋಗ ಮಾಡುವ ಮೂಲಕ ಜೀವನ ಮಾರ್ಗವನ್ನು ಕಂಡುಕೊಳ್ಳಬಹುದು, ಯೋಗ ಮಾನವನಿಗೆ ಬಹಳ ಮುಖ್ಯವಾದದು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ನಗರದ ಹೊರವಲಯದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರಾಥಮಿಕ ಯೋಗ ಪ್ರಶಿಕ್ಷಣ ಶಿಬಿರದ ಸಮರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಯೋಗ ಮಾಡಿದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು, ಯೋಗದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿದ ಅವರು ಹಣದಿಂದ, ಐಶ್ವರ್ಯದಿಂದ ಉತ್ತಮ ಆರೋಗ್ಯ ಸಿಗುವುದಿಲ್ಲ, ಯೋಗದಿಂದ ಮಾತ್ರ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು, ಆರೋಗ್ಯ ವೃದ್ದಿಸಿಕೊಳ್ಳಬಹುದು ಎಂದು ಹೇಳಿದರು.

ಜೀವನ ಶೈಲಿ ಬದಲಾದಂತೆ ಜೀವನವು ಕೂಡ ಬದಲಾವಣೆಯಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಮಾನವನಲ್ಲಿ ಶ್ರಮದಾನ ಎನ್ನುವುದು ಕಡಿಮೆಯಾಗಿದೆ. ಆದ್ದರಿಂದ ಯೋಗ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಯೋಗ ಮಾಡುವುದು ರೂಡಿಸಿಕೊಂಡರೆ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಸದುರ್ಗ ಕನಕಗುರುಪೀಠದ  ಈಶ್ವರಾನಂದ ಸ್ವಾಮೀಜಿಗಳ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ್ಯ ಸಂಚಾಲಕ ಜಿ. ಮಂಜುನಾಥಣ್ಣ,  ವೇದಾವತಿ ವಲಯ ಸಂಚಾಲಕ ಎ.ಕುಮಾರಣ್ಣ ಇದ್ದರು.

Share This Article
Leave a Comment

Leave a Reply

Your email address will not be published. Required fields are marked *