Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಧುನಿಕ ತಂತ್ರಜ್ಞಾನವನ್ನು ಬಳಸಿ ಉತ್ತಮ ಬೆಳೆ ಬೆಳೆಯಬಹುದು : ಕೆ.ಎಸ್. ನವೀನ್

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ,(ಜು.27) :  ಇಂದಿನ ದಿನಮಾನದಲ್ಲಿ ಕೃಷಿಯಲ್ಲಿ ಅಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುವುದರ ಮೂಲಕ ಕಡಿಮೆ ಗೊಬ್ಬರವನ್ನು ಬಳಕೆ ಮಾಡಿ ಹೆಚ್ಚಿನ ರೀತಿಯಲ್ಲಿ ಬೆಳೆಯನ್ನು ಬೆಳೆಯಬಹುದಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ತಿಳಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಬಿಜೆಪಿ ರೈತ ಮೋರ್ಚಾದಿಂದ ಶ್ರೀ ರಾಮರೆಡ್ಡಿ ಬಿ.ಎಂ.ಶಿವಮೂರ್ತಪ್ಪ ಅಂಗಡಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 1.25 ಲಕ್ಷ ಪ್ರಧಾನ ಮಂತ್ರಿ ಕಿಸಾನ್ ಸಮೃದ್ದಿ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದ ನಂತರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ವಿಶ್ವದ ವಿವಿಧ ದೇಶದಲ್ಲಿ ಆಹಾರದ ಕೂರತೆ ಉಂಟಾಗಿ ಅಲ್ಲಿನ ಜನತೆ ಆಹಾರಕ್ಕಾಗಿ ಅಂಗಡಿಗಳ ಮೇಲೆ ದಾಳಿಯನ್ನು ಮಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಇದರ ಕೂರತೆ ಇಲ್ಲದೆ ಎಲ್ಲರು ಸಹಾ ಸಮೃದ್ದವಾಗಿ ಆಹಾರವನ್ನು ಸೇವನೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ಪ್ರಧಾನ ಮಂತ್ರಿಗಳು ಕೃಷಿಗೆ ನೀಡಿದ ಒತ್ತು ಎನ್ನಬಹುದಾಗಿದೆ. ಯಾವ ದೇಶದಲ್ಲಿ ಕೃಷಿಗೆ ಮಾನ್ಯತೆಯನ್ನು ನೀಡುವುದಿಲ್ಲವೂ ಅಂತಹ ದೇಶ ಅವನತಿಯತ್ತ ಹೋಗುತ್ತದೆ ಎನ್ನುವುದಕ್ಕೆ ಬೇರೆ ದೇಶಗಳಲ್ಲಿ ನೆಡೆಯುತ್ತಿರುವ ದಾಳಿಗಳು ಸಾಕ್ಷಿಯಾಗಿವೆ. ವಿವಿಧ ದೇಶದಲ್ಲಿ ಅಕ್ಕಿಗೆ ಸಾವಿರಾರು ರೂ.ಗಳ ದರವಿದೆ. ಆದರೆ ನಮ್ಮ ದೇಶದಲ್ಲಿ ಇದಾವುದರ ಕೂರತೆ ಇಲ್ಲದೆ ಸಾಲಿಸಾಗಿ ಆಹಾರ ಸಿಗುವಂತಾಗಿದೆ. ಇದಕ್ಕೆ ಕಾರಣ ಸರ್ಕಾರ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಹಾಗೂ ರೈತರು ಅದರಂತೆ ದುಡಿಮೆಯನ್ನು ಮಾಡುವುದರ ಮೂಲಕ ದೇಶದ ಜನತೆ ಆಹಾರವನ್ನು ನೀಡುತ್ತಿರುವುದು ಆಗಿದೆ ಎಂದರು.

ಯಾವ ದೇಶದಲ್ಲಿ ರೈತಾಪಿ ವರ್ಗ ಚನ್ನಾಗಿ ಅಂತಹ ದೇಶ ಉತ್ತಮವಾಗಿರಲು ಸಾಧ್ಯವಿದೆ. ಇಂದು ಪ್ರಧಾನ ಮಂತ್ರಿಗಳು ರೈತರಿಗಾಗಿ ಮೂರು ಯೋಜನೆಯನ್ನು ಜಾರಿ ಮಾಡಿದ್ದಾರೆ, ಇದರ ಪ್ರಯೋಜನವನ್ನು ರೈತಾಪಿ ವರ್ಗದವರು ಪಡೆಯಬೇಕಿದೆ. ಇಂದು ಪ್ರಧಾನ ಮಂತ್ರಿ ಸಮ್ಮಾನ ಯೋಜನೆಯ 14ನೇ ಕಂತಿನ ಹಣ ಬಿಡುಗಡೆಯಾಗುತ್ತಿದೆ. ದೇಶದಲ್ಲಿ ರೈತ ಉಪಯೋಗಕ್ಕಾಗಿ ಪ್ರಧಾನ ಮಂತ್ರಿಗಳು 1600 ಕೃಷಿ ಉತ್ಪನ್ನಗಳ ಕೇಂದ್ರಗಳನ್ನು ಜಾರಿ ಮಾಡುತ್ತಿದ್ದಾರೆ. ಇದರಿಂದ ರೈತನಿಎಗೆ ಒಂದೇ ಸೂರಿನಡಿಯಲ್ಲಿ ಎಲ್ಲಾ ವಸ್ತುಗಳು ಸಿಗಲಿವೆ. ಇಂದಿನ ದಿನಮಾನದಲ್ಲಿ ಕೈಷಿಯಲ್ಲಿ ಉತ್ತಮವಾದ ಆವಿಷ್ಕಾರಗಳು ಆಗಿವೆ. ಅದನ್ನು ಕೈಷಿಯಲ್ಲಿ ಬಳಕೆ ಮಾಡುವುದರ ಮೂಲಕ ಕಡಿಮೆ ಜಾಗದಲ್ಲಿ ಕಡಿಮೆ ಗೂಬ್ಬರವನ್ನು ಬಳಕೆ ಮಾಡುವುದರ ಮೂಲಕ ಉತ್ತಮವಾದ ಇಳುವರಿಯನ್ನು ಪಡೆಯಬಹುದಾಗಿದೆ ಎಂದು ನವೀನ್ ತಿಳಿಸಿದರು.

ಇಂದಿನ ದಿನಮಾನದಲ್ಲಿ ರೈತರ ಮಕ್ಕಳು ರೈತರಾಗುತ್ತಿಲ್ಲ ಅವರ ಪೋಷಕರೆ ಇದು ಬೇಡ ಬೇರೆ ಕೆಲಸವನ್ನು ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ ಆದರೆ ಇಂದಿನ  ಅಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡುವುದರ ಮೂಲಕ ಉತ್ತಮವಾದ ಕೃಷಿಯನ್ನು ಮಾಡಬಹುದಾಗಿದೆ ಇದರ ಬಗ್ಗೆ ಅವರಿಗೆ ಅರಿವು ಜಾಗೃತಿಯನ್ನು ಮೂಡಿಸಬೇಕಿದೆ. ಕೃಷಿ ಬದುಕಿನಲ್ಲಿ ನೆಮ್ಮದಿ ಇದೆ ಎಂಬುದನ್ನು ಹಾಗೂ ಇದರಿಂದ ಉತ್ತಮವಾದ ಬದುಕನ್ನು ನಡೆಸಬಹುದೆಂದು ಸಹಾ ತೋರಿಸಬಹುದಾಗಿದೆ ಎಂದ ಅವರು, ಚಿತ್ರದುರ್ಗದಲ್ಲಿ ತೋಟಗಾರಿಕೆ ಉತ್ತಮವಾಗಿದೆ ಅದರೆ ಅದರ ಸಂಗ್ರಹಣೆಗೆ ಜಾಗ ಇಲ್ಲವಾಗಿದೆ ಇದರಿಂದ ಸರ್ಕಾರಕ್ಕೆ ಇದರ ಬಗ್ಗೆ ಮಾತನಾಡಿದ್ದೇನೆ ನಮ್ಮ ಜಿಲ್ಲೆಯೂ ಸಹಾ ಏರ್‍ಪೋಟಿಗೆ ಹತ್ತಿರವಾಗಿದೆ. ಆದ್ದರಿಂದ ಇಲ್ಲಿ ಶೀಥಲಿಕರಣ ಘಟಕಗಳನ್ನು ಪ್ರಾರಂಭ ಮಾಡುವುದರಿಂದ ರೈತರು ಬೆಳೆದ ಬೆಳೆಗಳನ್ನು ಸಂಗ್ರಹ ಮಾಡಲು ಅನುಕೂಲವಾಗುತ್ತದೆ ಎಂದು ನಿಮ್ಮಗಳ ಪರವಾಗಿ ಸದನದಲ್ಲಿ ಧ್ವನಿ ಎತ್ತಿರುವುದಾಗಿ ತಿಳಿಸಿದರು.

ಕೃಷಿ ಅಧಿಕಾರಿಗಳಾದ ಮಂಜುನಾಥ್ ಮಾತನಾಡಿ, ನಮ್ಮಲ್ಲಿ ಕಡಿಮೆ ದರದಲ್ಲಿ ರಸಗೂಬ್ಬರಗಳು ಸಿಗುತ್ತವೆ ಆಧುನಿಕ ತಂತ್ರಗಳನ್ನು ಬಳಕೆ ಮಾಡುವುದರ ಮೂಲಕ ಕೃಷಿಯನ್ನು ಉತ್ತಮಗೂಳಿಸಬಹುದಾಗಿದೆ. ಈ ಹಿಂದೆ ಸಾವಯವ ಗೂಬ್ಬರವನ್ನು ಬಳಕೆ ಮಾಡುವುದರ ಮೂಲಕ ಭೂಮಿ ಚನ್ನಾಗಿ ಇತ್ತು ಆದರೆ ಇತ್ತೇಚೇಗೆ ರಸಗೂಬ್ಬರವನ್ನು ಹಾಕುವುದರ ಮೂಲಕ ಭೂಮಿಯನ್ನು ಹಾಳು ಮಾಡಲಾಗಿದೆ. ಸಾವಯವ ಗೂಬ್ಬರ ಬಳಕೆ ಕಡಿಮೆಯಾಗಿದ್ದು ಇದರಿಂದ ಇಳುವರಿ ಕೂಡ ಕಡಿಮೆಯಾಗಿದೆ ಎಂದ ಅವರು ಕೇಂದ್ರ ಸರ್ಕಾರ ರೈತರ ಉಪಯೋಗಕ್ಕಾಗಿ ಕಿಸಾನ್ ಸಮ್ಮನ್ ಯೋಜನೆಯನ್ನು ಪ್ರಾರಂಭ ಮಾಡಿತ್ತು ಇದರಲ್ಲಿ ನಮ್ಮ ಜಿಲ್ಲೆಯಲ್ಲಿ 2,13,761 ರೈತರಿಗೆ ಇದುವರೆವಿಗೂ 13 ಕೋಟಿ ರೂಗಳನ್ನು ನೀಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಎ.ಮುರಳಿಧರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿದ್ದಾಪುರದ ಸುರೇಶ್, ಬಿಜೆಪಿ ರೈತ ಮೂರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಪ್ರಶಾಂತ ಕುಮಾರ್, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ರಸಗೂಬ್ಬರ ಮಾರಾಟಗಾರರ ಸಂಘದ ಅಧ್ಯಕ್ಷರಾದ ರೇವಣಸಿದ್ದಪ್ಪ, ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜನ್, ಹಸಿರು ಸೇನೆಯ ನಾಗರಾಜು, ಸಂಪತ್ ಕುಮಾರ್ ನರೇಂದ್ರ ಕುಮಾರ್, ಅಮರನಾಥ್ ರೆಡ್ಡಿ, ಪ್ರಸನ್ನ, ಪ್ರಭಾಕರ್ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉದ್ಯೋಗ ವಾರ್ತೆ | ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಹುದ್ದೆಗಳ ನೇಮಕ

ಸುದ್ದಿಒನ್, ಬೆಂಗಳೂರು, ಮೇ. 24 :ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಒಟ್ಟು 902 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್ನಲ್ಲಿ ನೇಮಕ ಪ್ರಕ್ರಿಯೆ

ಉದ್ಯೋಗ ವಾರ್ತೆ | ಅತಿಥಿ ಶಿಕ್ಷಕರ, ಉಪನ್ಯಾಸಕರ ನೇಮಕಕ್ಕೆ ಅರ್ಜಿ

  ಚಿತ್ರದುರ್ಗ. ಮೇ.24:  ಚಿತ್ರದುರ್ಗ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಲೇಜು, ಮೌಲಾನಾ ಆಜಾದ್ ಮಾದರಿ ಶಾಲೆಗಳಿಗೆ ಅತಿಥಿ ಶಿಕ್ಷಕರು, ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಐಪಿಎಲ್ ನಿಂದ ಹೊರಬಿದ್ದ ಮೇಲೆ ಅಭಿಮಾನಿಗಳಿಗಾಗಿ ಪೋಸ್ಟ್ ಹಾಕಿದ ವಿರಾಟ್ ಕೊಹ್ಲಿ

  ಈ ಬಾರಿಯ ಐಪಿಎಲ್ ನಲ್ಲಿ ಆರ್ಸಿಬಿ ಟೀಂ ಆಡಿದ್ದು ನೋಡಿದ್ರೆ ಖಂಡಿತ ಕಪ್ ಗೆದ್ದು ತಂದೇ ತರುತ್ತಾರೆ ಎಂಬ ವಿಶ್ವಾಸ ಎಲ್ಲರಿಗೂ ಮೂಡಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಸೋತು,

error: Content is protected !!