ಲಾಸ್ ಏಂಜಲೀಸ್ ನಲ್ಲಿ 80ನೇ ಗೋಲ್ಡನ್ ಗ್ಲೋಬ್ ಅವಾರ್ಡ್ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ RRR ಸಿನಿಮಾ ಪ್ರಶಸ್ತಿ ಬಾಚಿಕೊಂಡಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ.
RRR ಸಿನಿಮಾದಲ್ಲಿ ನಾಟು ನಾಟು ಎಂಬ ಹಾಡಿದೆ. ಈ ಹಾಡಿಗೆ ಹೆಜ್ಜೆ ಹಾಕದವರೇ ಇಲ್ಲ. ಇದೀಗ ಇದೇ ಹಾಡಿಗೆ, 2023ರ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಂದಿದೆ. ಈ ಸಿನಿಮಾದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿಗೆ ಈ ಪ್ರಶಸ್ತಿ ದೊರಕಿದೆ. ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಸಿನಿಮಾಗಳು, ಆಸ್ಕರ್ ನಲ್ಲಿ ಗೆಲ್ಲುವುದು ಸುಲಭವಾಗಲಿದೆ.
ಆರ್ಆರ್ಆರ್ ಸಿನಿಮಾ ಕೂಡ ಆಸ್ಕರ್ ರೇಸ್ ನಲ್ಲೂ ಇದೆ. ಆರ್ಆರ್ಆರ್ ಹೊರತುಪಡಿಸಿದರೆ, ಅವತಾರ್, ದಿ ವೇ ಆಫ್ ವಾಟರ್, ಟಾಪ್ ಗನ್: ಮೇವರಿಕ್ ಕೂಡ ಸ್ಪರ್ಧೆ ನಡೆಸಿದ್ದವು. ಉಳಿದಂತೆ
ಸಿನಿಮಾದ ಅತ್ಯುತ್ತಮ ಪೋಷಕ ನಟಿ- ಜೆನ್ನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)
ಅತ್ಯುತ್ತಮ ಚಿತ್ರಕತೆ- ದಿ ಬ್ಯಾನ್ಶೀಸ್ ಆಫ್ ಇನೆಶೆರೀನ್
ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್ಬರ್ಗ್, (ದಿ ಫೇಬಲ್ಮ್ಯಾನ್ಸ್)
ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (RRR ಸಿನಿಮಾ ಈ ವಿಭಾಗದಲ್ಲಿ ಸೋತಿದೆ) ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)
ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್) ಟಿವಿ ಸೀರೀಸ್
ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)
ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್)
ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)
ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)
ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್ವಿಟ್ಜ್ (ಬ್ಯಾಬಿಲಾನ್)
ಅತ್ಯುತ್ತಮ ಹಾಡು- ನಾಟು-ನಾಟು (RRR)
ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ
ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ್ಯಾಗನ್ಸ್
ಸಂಗೀತ ಹಾಗೂ ಕಾಮಿಡಿ ಜಾನರ್ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ
ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ
ಟಿವಿ ಸೀರೀಸ್ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)
ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)
ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿ ಡ್ರಾಪೌಟ್) ಟಿವಿ
ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)