ಬೆಂಗಳೂರು: ಬುಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಕಳೆದ ವಾರ ಅನಿರೀಕ್ಷಿತ ತಿರುವೊಂದು ಎದುರಾಗಿತ್ತು. ಶಿಶಿರ್ ಮನೆಯಿಂದ ಔಟ್ ಆಗಿದ್ದರು. ಆದರೆ ಗೋಲ್ಡ್ ಸುರೇಶ್ ಸೇಫ್ ಆಗಿದ್ರು ಮನೆಯಿಂದ ಬರಬೇಕಾಗಿ ಬಂತು. ‘ನಿಮ್ಮ ಅಗತ್ಯ ಬಿಗ್ ಬಾಸ್ ಮನೆಗಿಂತ ಕುಟುಂಬಕ್ಕೆ ಹೆಚ್ಚಾಗಿದೆ’ ಎಂದು ಬಿಗ್ ಬಾಸ್ ಹೇಳಿದಾಗ ಎಲ್ಲರೂ ಅವರ ಕುಟುಂಬಕ್ಕೆ ಏನಾದರೂ ಆಯ್ತಾ ಎಂದೇ ಆತಂಕಗೊಂಡಿದ್ದರು. ಅವರ ತಂದೆ ಹಾಗೂ ಸಹೋದರ ವಿಡಿಯೋ ಮೂಲಕ ನಮಗೆ ಏನು ಆಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದರು. ಏನು ಆಗಿಲ್ಲ ಅಂದ್ರೆ ಬಿಗ್ ಬಾಸ್ ಮನೆಯಿಂದ ಹೊರಗ್ಯಾಕೆ ಬಂದ್ರು ಎಂಬ ಪ್ರಶ್ನೆ ವೀಕ್ಷಕರದ್ದು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ.
ಖಾಸಗಿ ಚಾನೆಲ್ ಒಂದಕ್ಕೆ ಮಾತನಾಡಿರುವ ಗೋಲ್ಡ್ ಸುರೇಶ್, ನಾನೊಬ್ಬ ಬಿಸಿನೆಸ್ ಮ್ಯಾನ್. ನನ್ನದೇ ಆದ ಅನೇಕ ಬಿಸಿನೆಸ್ ಗಳಿವೆ. ನನ್ನನ್ನು ನಂಬಿ ಹಲವು ಕುಟುಂಬಗಳಿವೆ. ಬಿಗ್ ಬಾಸ್ ಗೆ ಬರುವುದಕ್ಕೂ ಮುನ್ನ ನಾನು ಬಿಸಿನೆಸ್ ನೋಡಿಕೊಳ್ಳುತ್ತಿದ್ದೆ. ಬಿಗ್ ಬಾಸ್ ಮನೆಗೆ ಹೋದರೆ ನನ್ನ ಎಲ್ಲಾ ಬಿಸಿನೆಸ್ ನೋಡಿಕೊಳ್ಳಯವವರು ಯಾರು ಎಂಬ ಯೋಚನೆ ಇತ್ತು. ತುಂಬಾ ಯೋಚಿಸಿದ ಬಳಿಕ ಎಲ್ಲಾ ಜವಬ್ದಾರಿಯನ್ನು ನನ್ನ ಧರ್ಮಪತ್ನಿಗೆ ವಹಿಸಿದೆ.
ಆದರೆ ಆಕೆಗೆ ಬಿಸಿನೆಸ್ ನಲ್ಲಿ ಯಾವುದೇ ಅನುಭವ ಇರಲಿಲ್ಲ. ಎಲ್ಲವನ್ನು ಒಟ್ಟಿಗೆ ಬಿಟ್ಟು ಹೋಗಿದ್ದ ಕಾತಣ ನಿಭಾಯಿಸುವುದು ಆಕೆಗೆ ಕಷ್ಟವಾಗಿತ್ತು. ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು. ಇದರಿಂದ ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾಯ್ತು’ ಎಂದಿದ್ದಾರೆ.