Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಕೇಸ್ : ದರ್ಶ‌ನ್ ನೀಡಿದ್ದ ಭಗವದ್ಗೀತೆ ಹಿಡಿದು ಜೈಲಿನಿಂದ ಹೊರ ಬಂದ ಅನುಕುಮಾರ್..!

---Advertisement---

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಇಂದು ಏಳನೇ ಆರೋಪಿಯಾಗಿದ್ದ ಅನುಕುಮಾರ್ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಿದ್ದಾರೆ‌ ಜೈಲಿನಿಂದ ಹೊರಗೆ ಬರುವಾಗ ಆತ ತನ್ನ ಕೈನಲ್ಲಿ ಹಿಡಿದಿದ್ದ ಭಗವದ್ಗೀತೆ ಪುಸ್ತಕ ಎಲ್ಲರ ಗಮನ ಸೆಳೆದಿದೆ. ಈ ಭಗವದ್ಗೀತೆ ಪುಸ್ತಕವನ್ನು ನಟ ದರ್ಶನ್ ನೀಡಿದ್ದರಂತೆ. ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುವಾಗ ದರ್ಶನ್ ಆ ಪುಸ್ತಕವನ್ನು ಅನುಕುಮಾರ್ ಅವರಿಗೆ ನೀಡಿದ್ದರಂತೆ. ಇಲ್ಲಿಯವರೆಗೂ ಆ ಪುಸ್ತಕವನ್ನು ಅನುಕುಮಾರ್ ಜೋಪಾನವಾಗಿಟ್ಟುಕೊಂಡಿದ್ದರಂತೆ.

ಅನುಕುಮಾರ್ ಅವರಿವೆ ಕಳೆದ ಶುಕ್ತವಾರವೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಆದರೆ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿರಲಿಲ್ಲ. ಹೀಗಾಗಿ ಇಂದು ರಿಲೀಸ್ ಆಗಿದ್ದಾರೆ. ಷರತ್ತು ಬದ್ಧ ಜಾಮೀನಿಗೆ ಶ್ಯೂರಿಟಿ ಕೂಡ ಹಾಕಬೇಕಿದ್ದದ್ದರಿಂದ ಇಂದು ಬಿಡುಗಡೆಯಾಗಿದ್ದಾರೆ. ಭಗವದ್ಗೀತೆ ಪುಸ್ತಕದೊಂದಿಗೆ ಜೈಲಿನಲ್ಲಿ ಕಾಲ ಕಳೆದಿದ್ದ ಅನುಕುಮಾರ್, ತನ್ನ ಸಹೋದರ ಜೊತೆಗೆ ಜೈಲಿನಿಂದ ತೆರಳಿದ್ದಾರೆ.

ಅತ್ತ ಶಿವಮೊಗ್ಗ ಜೈಲಿನಲ್ಲಿದ್ದ ಆರನೇ ಆರೋಪಿ ಜಗದೀಶ್ ಕೂಡ ಬಿಡುಗಡೆಯಾಗಿದ್ದಾನೆ. ಶಿವಮೊಗ್ಗ ಕಾರಾಗೃಹದಿಂದ ಬುಧವಾರ ಸಂಜೆ ವೇಳೆಗೆ ರಿಲೀಸ್ ಆಗಿದ್ದಾರೆ. ಬುಧವಾರ ಬೆಳಗ್ಗೆ ಬೆಂಗಳೂರಿನ ಕೋರ್ಟ್ ನಲ್ಲಿ ಜಾಮೀನು ಪ್ರಕ್ರಿಯೆ ಮುಗಿದಿದ್ದರಿಂದ ಸಂಜೆ ವೇಳೆಗೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ. ಜಗದೀಶ್ ರನ್ನು ಕರೆದುಕೊಂಡು ಹೋಗಲು ಅವರ ತಮ್ಮ ಜೈಲಿನ ಬಳಿ ಬಂದಿದ್ದರು. ಮಾಧ್ಯಮದವರ ಕಣ್ಣಿಂದ ತಪ್ಪಿಸಿಕೊಂಡು ಚಿತ್ರದುರ್ಗಕ್ಕೆ ಹೋಗಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈಗಾಗಲೇ ಏಳು ಜನರಿಗೆ ಜಾಮೀನು ನೀಡಿದೆ. ಆದರೆ ಕಾನೂನು ಪ್ರಕ್ರಿಯೆ ಮುಗಿಸಿ ಒಬ್ಬೊಬ್ಬರೇ ಹಿರಗೆ ಬರುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...