ಬೆಂಗಳೂರು; ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ಕಂಬಿ ಎಣಿಸ್ತಾ ಇರೋದು ಎಲ್ಲರಿಗೂ ಗೊತ್ತೆ ಇದೆ. ತನಿಖೆ ಕೂಡ ನಡೆಯುತ್ತಲೇ ಇದೆ. ಅದರ ಭಾಗವಾಗಿಯೇ ಇಂದು ಇಡಿ ಅಧಿಕಾರಿಗಳು ಗೃಹ ಸಚಿವ ಜಿ ಪರಮೇಶ್ವರ್ ಅವರ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿದೆ. ಈ ದಾಳಿಯನ್ನ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ. ಉದ್ದೇಶ ಪೂರ್ವಕವಾಗಿದ್ದು ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಇದೀಗ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ @DrParameshwara ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ (ED) ತಂಡ ದಾಳಿ ಮಾಡಿದೆ. ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ್ ಅವರ ಪಾತ್ರವೂ ಇರುವುದು ಇಡಿ ದಾಳಿಯಿಂದ ಬಯಲಾಗುತ್ತಿದೆ. ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿಬಿದ್ದ ನಟಿ ರನ್ಯಾಗೂ, ಗೃಹ ಸಚಿವರ ಸಿದ್ಧಾರ್ಥ ಕಾಲೇಜಿನ ನಡುವೆ ಅಕ್ರಮವಾಗಿ ಹಣಕಾಸಿನ ವರ್ಗಾವಣೆ ನಡೆದಿದೆ. ರನ್ಯಾ ಗೋಲ್ಡ್ ಸ್ಮಗ್ಲಿಂಗ್ ಮಾಡಿಗಳಿಸಿರುವ ಹಣದ ಹೂಡಿಕೆಗಳ ಬಗ್ಗೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜೆಡಿಸರ್ ಟ್ವೀಟ್ ಮಾಡಿದೆ.
ಕರ್ನಾಟಕದ ಭ್ರಷ್ಟ @INCKarnataka ಸರ್ಕಾರದ ಕಲೆಕ್ಷನ್ ಏಜೆಂಟ್ @rssurjewal ಅವರೆ, ಅದು ಶಿಕ್ಷಣ ಸಂಸ್ಥೆಯ ಮೇಲಿನ ದಾಳಿ ಅಲ್ಲ, ಅದು ಗೋಲ್ಡ್ ಸ್ಮಗ್ಲರ್ ರನ್ಯಾ ರಾವ್ ಶಿಕ್ಷಣ ಸಂಸ್ಥೆಯಲ್ಲಿ ಎಷ್ಟು ಹೂಡಿಕೆ ಮಾಡಿದ್ದಾರೆ ಎಂಬುದನ್ನು ತಿಳಿಯಲು ಮಾಡಿರುವ ದಾಳಿ ಇರಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ನಿಮಗೆ ನಿಜಕ್ಕೂ @DrParameshwara ಅವರ ಮೇಲೆ ಪ್ರೀತಿ,ಮಮತೆ, ಕಾಳಜಿಯಿದ್ದರೆ ಅವರನ್ನು 2013ರ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ ಸೋಲಿಸಿದ @siddaramaiah ಅವರನ್ನು ಕೂಡಲೇ ಸಿಎಂ ಕುರ್ಚಿಯಿಂದ ಕೆಳಗಿಳಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.






