ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ ಚಿನ್ನದ ಬೆಲೆಯಲ್ಲಿ ಇಂದು ಏರಿಕೆಯಾಗಿರುವುದು ಎಷ್ಟು ರೂಪಾಯಿ..? ಈಗ ಗ್ರಾಂ ಚಿನ್ನ ಎಷ್ಟಿದೆ..? ಹತ್ತು ಗ್ರಾಂಗೆ ಎಷ್ಟಾಗಲಿದೆ ಎಂಬೆಲ್ಲಾ ಮಾಹಿತಿ ಇಲ್ಲಿದೆ ನೋಡಿ.
ಇಂದು ಚಿನ್ನದ ಬೆಲೆಯಲ್ಲಿ 15 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಈಗ ಒಂದು ಗ್ರಾಂ ಚಿನ್ನದ ಬೆಲೆ 7,135 ರೂಪಾಯಿ ಆಗಿದೆ. ಆಭರಣದ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದ್ದು, ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 7,150 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಸದ್ಯ ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 71,500 ರೂಪಾಯಿ ಆಗಿದೆ. 24 ಕ್ಯಾರೆಟ್ ನ ಹತ್ತು ಗ್ರಾಂಗೆ 77,960 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯೂ ಏರಿಕೆಯಾಗುತ್ತಲೆ ಇದ್ದು ಬೆಂಗಳೂರು ಸೇರಿದಂತೆ ವಿವಿದೆಢೆ 92 ರೂಪಾಯಿ ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 9,200 ರೂಪಾಯಿ ಆಗಿದೆ.
ಉಳಿದಂತೆ ಚೆನ್ನೈನಲ್ಲಿ 22 ಕ್ಯಾರೆಟ್ ಹತ್ತು ಗ್ರಾಂ ಚಿನ್ನದ ಬೆಲೆ 71,500 ರೂಪಾಯಿ ಆಗಿದೆ. ಮುಂಬೈನಲ್ಲೂ 71,500 ರೂಪಾಯಿ ಇದೆ. ದೆಹಲಿಯಲ್ಲಿ 71,650 ರೂಪಾಯಿ ಆಗಿದೆ. ಕೊಲ್ಕತ್ತಾದಲ್ಲಿ 71,500 ಇದೆ. ಕೇರಳ, ಅಹ್ಮದಾಬಾದ್, ಭುವನೇಶ್ವರದಲ್ಲಿ 71,500 ರೂಪಾಯಿ ಹತ್ತು ಗ್ರಾಂ ಚಿನ್ನದ ಬೆಲೆಯಾಗಿದೆ. ಈ ಬೆಲೆ ಇನ್ನು ಏರುವ ಸಾಧ್ಯತೆ ಇದೆ ಎಂಬುದೇ ಆಭರಣ ಪ್ರಿಯರ ಬೇಸರ.