ಬೆಂಗಳೂರು: ಚಿನ್ನ ಬೆಳ್ಳಿ ಬೆಲೆಯಲ್ಲಿ ನಿರೀಕ್ಷೆಯಂತೆ ಡಿಸೆಂಬರ್ ತಿಂಗಳಲ್ಲಿ ಇಳಿಕೆಯಾಗುತ್ತಿದೆ. ದಿನೇ ದಿನೇ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ನಿನ್ನೆಯೂ ಇಳಿಕೆಯಾಗಿದ್ದ ಚಿನ್ನ ಇಂದು ಕೂಡ ಇಳಿಕೆಯಾಗಿದೆ. ಸುಮಾರು 40 ರೂಪಾಯಿ ಅಷ್ಟು ಇಳಿಕೆಯಾಗಿದೆ. ಒಂದು ಗ್ರಾಂಗೆ 40 ರೂಪಾಯಿ ಇಳಿಕೆಯಾಗಿರುವುದು ಆಭರಣ ಪ್ರಿಯರಿಗೆ ಕೊಂಚ ಖುಷಿ ತರಿಸಿದೆ. ಸತತ ಒಂದು ವಾರದಿಂದ ಇಳಿಕೆಯತ್ತ ಚಿನ್ನದ ದರ ಸಾಗುತ್ತಿರುವುದು ಖುಷಿ ಕೊಟ್ಟಿದೆ. ಈ ಮೂಲಕ 22 ಕ್ಯಾರಟ್ ಚಿನ್ನ ಈಗ ಹತ್ತು ಗ್ರಾಂಗೆ 70,400 ರೂಪಾತಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 76,800 ರುಇಪಾಯಿ ಆಗಿದೆ.
ಸದ್ಯ ಭಾರತ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಿರಿ.
ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತಾ, ಕೇರಳ, ಭುವನೇಶ್ವರದಲ್ಲಿ ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ದರ 70,400 ರೂಪಾಯಿ ಇದೆ. ಉಳಿದಂತೆ ದೆಹಲಿಯಲ್ಲಿ 70,550 ಇದ್ರೆ, ಅಹ್ಮದಾಬಾದ್ ನಲ್ಲಿ 70,450 ರೂಪಾಯಿ ಇದೆ. ಜೈಪುರ್, ಲಕ್ನೋ ನಗರದಲ್ಲಿ 70,550 ರೂಪಾಯಿ ಇದೆ. ವಿದೇಶದಲ್ಲಿನ ದರವನ್ನು ನೋಡುವುದಾದರೆ ಮಲೇಷ್ಯಾದಲ್ಲಿ 68,460 ಇದೆ. ದುಬೈನಲ್ಲಿ 67,420 ಆಗಿದೆ. ಇನ್ನು ಅಮೆರಿಕಾದಲ್ಲಿ 66,380 ರೂಪಾಯಿ ಇದೆ. ಸಿಂಗಾಪುರದಲ್ಲಿ 67,910 ರೂಪಾಯಿ ಇದೆ. ಸೌದಿ ಅರೇಬಿಯಾದಲ್ಲಿ 67,420 ರೂಪಾಯಿ ಇದೆ. ಈ ಮೂಲಕ ವಿದೇಶದಲ್ಲೂ ಒಂದೊಂದು ರೀತಿಯ ಬೆಲೆ ಇದೆ.
ಹಾಗೇ ಬೆಳ್ಳಿ ಬೆಲೆಯಲ್ಲೂ ವ್ಯತ್ಯಾಸವಾಗಿದ್ದು, ನೂರು ಗ್ರಾಂ ಬೆಳ್ಳಿ ಬೆಲೆ, ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತಾ, ಅಹ್ಮದಾಬಾದ್ ನಗರದಲ್ಲಿ 9,050 ರೂಪಾಯಿ ಇದೆ. ಚೆನ್ನೈ, ಭುವನೇಶ್ವರದಲ್ಲಿ 9,800 ರೂಪಾಯಿ ಇದೆ.