ಬೆಂಗಳೂರು; ಚಿನ್ನದ ದರದಲ್ಲಿ ಇಂದು ಭರ್ಜರಿಯಾಗಿ ಇಳಿಕೆಯಾಗಿದೆ. 22 ಕ್ಯಾರಟ್ ನ ಒಂದು ಗ್ರಾಂಗೆ 195 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 8,610 ರೂಪಾಯಿ ಇದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 213 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ 9,393 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 86,100 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 93,930 ರೂಪಾಯಿ ಆಗಿದೆ.
ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 86,100 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 86,250 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 83,110 ರೂಪಾಯಿ ಇದೆ. ಅಮೆರಿಕಾದಲ್ಲಿ 83,910 ಇದೆ. ಸೌದಿಯಲ್ಲಿ 82,860 ರೂಪಾಯಿ ಇದೆ.
ಬೆಳ್ಳಿ ಬೆಲೆ ಗ್ರಾಂಗೆ 1 ರೂಪಾಯಿ ಕಡಿಮೆ ಆಗಿದ್ದು, ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 97 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 9,700 ರೂಪಾಯಿ ಆಗಿದೆ. ಚೆನ್ನೈ, ದೆಹಲಿ, ಕೊಲ್ಕತ್ತಾ, ಅಹ್ಮದಾಬಾದ್, ಜೈಪುರ, ಲಕ್ನೋ, ಪುಣೆ ನಗರದಲ್ಲಿ ಬೆಳ್ಳಿಯ ಬೆಲೆ 9,700 ಇದ್ರೆ, ಕೇರಳ, ಭುವನೇಶ್ವರ, ಚೆನ್ನೈನಲ್ಲಿ 10,800 ರೂಪಾಯಿ ಇದೆ.


