ಚಿನ್ನ – ಬೆಳ್ಳಿ ಬೆಲೆ ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಇಳಿಕೆ ; ಕಾರಣವೇನು..? ಅಕ್ಷಯ ತೃತೀಯ ತನಕವೂ ಇಳಿಯಲಿದೆಯಾ..?

suddionenews
1 Min Read

 

ಚಿನ್ನ ಬೆಳ್ಳಿ ದರ ಏರಿಕೆಯತ್ತಲೇ ಸಾಗುತ್ತಿತ್ತು. ಇಂದು ಮಹಿಳೆಯರ ಚಿನ್ನದ ಕನಸಿಗೆ ಬೇಸರವನ್ನೇ ತಂದಿತ್ತು. ಇದೀಗ ದಿಢೀರನೇ ಚಿನ್ನ – ಬೆಳ್ಳಿ ಕುಸಿತ ಕಂಡಿದೆ. ಆಗಾಗ ಏರಿಕೆ ಮತ್ತು ಇಳಿಕೆ ವಿಚಾರದಲ್ಲಿ ಹಾವು ಏಣಿ ಆಟ ಆಡೋದು ಸರ್ವೇ ಸಾಮಾನ್ಯ. ಆದರೆ ಇಂದು ಜಾಗತಿಕ ಮಟ್ಟದಲ್ಲಿ ಇಳಿಕೆಯಾಗಿದೆ. ಮುಂದೆಯೂ ಇಳಿಕೆಯಾಗುವ ಸಾಧ್ಯತೆ ಇದೆ ಎಂದೇ ತಜ್ಞರು ಹೇಳುತ್ತಿದ್ದಾರೆ. ಅದಕ್ಕೆ ಕಾರಣವೂ ಇದೆ.

ಇಂದು ಚಿನ್ನ ಮತ್ತು ಬೆಳ್ಳಿ ಎರಡರ ಮೇಲೂ ಬೆಲೆ ಇಳಿದಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಂಗೆ 160 ರೂಪಾಯಿ ಇಳಿಕೆಯಾಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಬೆಲೆ 174 ರೂಪಾಯಿ ಇಳಿಕೆಯಾಗಿದೆ. ಭಾರತದಲ್ಲಿ ಮಾತ್ರವಲ್ಲ ಜಾಗತಿಕ ಮಟ್ಟದಲ್ಲಿ ಕಡಿಮೆಯಾಗಿದೆ. ಎಂಸಿಎಕ್ಸ್ ನಲ್ಲಿ 9 ಸಾವಿರಕ್ಕಿಂತ ಕಡಿಮೆ ಮಟ್ಟಕ್ಕೆ ಇಳಿಕೆಯಾಗಿದೆ. ಅಮೆರಿಕದ ಕಾಮೆಕ್ಸ್ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶೇಕಡ 14ರಷ್ಟು ಇಳಿಕೆಯಾಗಿದೆ.

ಆದರೆ ಕುತೂಹಲ ವಿಚಾರ ಅಂದ್ರೆ ಟ್ರಂಪ್ ಆರಂಭಿಸಿದ ಟ್ಯಾರಿಫ್ ಸಮರದಿಂದಾಗಿ ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಹಾಗೂ ಹಣದುಬ್ಬರದ ಏರಿಳಿತ ಉಂಟಾಗಿದೆ. ಈ ಪರಿಸ್ಥಿತಿಯನ್ನ ನೋಡಿದರೆ ಚಿನ್ನ ಬೆಳ್ಳಿ ಬೆಲೆ ಏರಿಕೆಯಾಗಬೇಕಿತ್ತು. ಆದರೆ ಇಳಿಕೆಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಟ್ರಂಪ್ ಸದ್ಯ ವಿವಿಧ ದೇಶಗಳ ಮೇಲೆ ಪ್ರತಿ ಸುಂಕ ಘೋಷಣೆ ಮಾಡಿದಾಗ ಕೆಲ ವಸ್ತುಗಳ ಮೇಲೆ ಸುಂಕ ವಿನಾಯಿತಿಯನ್ನೂ ಘೋಷಣೆ ಮಾಡಿದ್ದಾರೆ. ಹೀಗೆ ವಿನಾಯಿತಿ ಸಿಕ್ಕ ವಸ್ತುಗಳಲ್ಲಿ ಚಿನ್ನವೂ ಒಂದಾಗಿದೆ. ಟ್ರಂಪ್ ಚಿನ್ನದ ಮೇಲೆ ಸುಂಕ ಹಾಕಬಹುದು ಎನ್ನಲಾಗುತ್ತಿತ್ತು. ಹೀಗಾಗಿಯೇ ಚಿನ್ನದ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯಾಗಿತ್ತು. ಈಗ ಟ್ಯಾರೀಫ್ ಇಲ್ಲವಾಗಿರೋ ಕಾರಣ, ಹೂಡಿಕೆದಾರರು ಚಿನ್ನವನ್ನು ಮಾರಿ ಪ್ರಾಫಿಟ್ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಅಮೆರಿಕದ ಮಾರ್ನಿಂಗ್ ಸ್ಟಾರ್ ಎನ್ನುವ ಫೈನಾನ್ಷಿಯಲ್ ಸರ್ವಿಸ್ ಸಂಸ್ಥೆಯ ಮಾರ್ಕೆಟ್ ಸ್ಟ್ರಾಟಿಜಿಸ್ಟ್ ಆಗಿರುವ ಜಾನ್ ಮಿಲ್ಸ್ ಅವರು ಚಿನ್ನದ ಬೆಲೆ ಶೇ. 38ರಷ್ಟು ಇಳಿಕೆ ಆಗಬಹುದು ಎಂದು ಊಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *