ದೇವ್ರೇ ನನ್ನ ಮಕ್ಕಳೇ ನಿಮಗೆ ಬೇಕಿತ್ತಾ ; ಹಳ್ಳದಲ್ಲಿ ಕಾಲು ಜಾರಿ ಬಿದ್ದ ಮಕ್ಕಳ ಪೋಷಕರ ಆಕ್ರಂದನ…!

suddionenews
2 Min Read

ಕುರುಗೋಡು. (ಫೆ.2) : ಅಂಬಾದೇವಿ, ಗಂಗಾದೇವಿ ನಮ್ಮ ಮಕ್ಕಳೇ ಬೇಕಿತ್ತಾ ನಿಮಗೆ ಶೌಚಕ್ಕೆ ಹೋದ ಒಂದೇ ಕುಟುಂಬದ ಇಬ್ಬರ ಬಾಲ ಮಕ್ಕಳ ಜೀವ ಕಸಿದುಕೊಂಡು ನಮ್ಮ ಕುಟುಂಬವನ್ನೇ ಅನಾಥ ಮಾಡಿ ಬಿಟ್ಟಿಯಲ್ಲ ಎಂದು ಕುಟುಂಬಸ್ಥರು ತಮ್ಮ ಆಕ್ರಂದವನ್ನು ಹೊರ ಹಾಕಿದರು.

ಸಮೀಪದ ಗುತ್ತಿಗನೂರು ಗ್ರಾಮದಲ್ಲಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಹಳ್ಳದಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟಿರುವ  ದಾರುಣ ಘಟನೆ ಗುರುವಾರ ಮದ್ಯಾಹ್ನ ಜರುಗಿದೆ.

ಹೌದು ಸಮೀಪದ ಗುತ್ತಿಗನೂರು ಗ್ರಾಮದ ಕುರುಬ ಸಮುದಾಯದ ತಂದೆ ಮಲ್ಲಿಕಾರ್ಜುನ ತಾಯಿ ಲಕ್ಷ್ಮಿ ಅವರ ಮೊದಲನೇ ಮಗ ಮತ್ತು ಕೊನೆಯ ಮಗ ಬೇರೆ ಗ್ರಾಮಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು ಮಂಗಳವಾರ ಗ್ರಾಮದಲ್ಲಿ ಅಂಬಾದೇವಿ ಜಾತ್ರಾ ಮಹೋತ್ಸವ ಇದ್ದ ಕಾರಣಕ್ಕೆ ಗ್ರಾಮಕ್ಕೆ ಬಂದಿದ್ದಾರೆ, ಗುರುವಾರ ಮದ್ಯಾಹ್ನ ಗ್ರಾಮದ ಹಳ್ಳದ ತೀರಕ್ಕೆ ಬಯಲು ಬಹಿರ್ದೆಸೆ ಸೌಚಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಇಬ್ಬರು ಕಾಲು ಜಾರಿ ಬಿದ್ದು ನೀರು ಪಲಾಗಿದ್ದಾರೆ.

ಇವರ ಜೊತೆಗೆ ಇದ್ದ ಸಂಬಂಧಿ ಸುರೇಶ್ ಎನ್ನುವ ಬಾಲಕ ಗ್ರಾಮಸ್ಥರಿಗೆ ತಿಳಿಸಿದ್ದಾನೆ ಕೂಡಲೇ ಸ್ಥಳಕ್ಕೆ ಬಂದು ನಂತರ ಹರ್ಷ ವರ್ದನನ್ನು ನೀರಿನಿಂದ ಹೊರಗಡೆ ತಂದಿದ್ದಾರೆ ನಂತರ ಮಣಿಕಂಠನನ್ನು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಎಲ್ಲಾದರೂ ಇದ್ದಾನೆ ಅಂತ ಗ್ರಾಮದಲ್ಲಿ ಹುಡುಕಾಡಿದ್ದಾರೆ ಸಿಗದ ಪರಿಣಾಮ ಹಳ್ಳದಲ್ಲಿ ಹುಡುಕಾಡಿದ  ನಂತರ ಆ ಬಾಲಕನ ಮೃತ ಶವ ಸಿಕ್ಕಿದೆ.

ಮೃತ ಪಟ್ಟ ಬಾಲಕರ ಶವವನ್ನು ಶಾಸಕ ಗಣೇಶ್ ತಮ್ಮ ಕಾರಿನಲ್ಲಿ ಮನೆಗೆ ಸಾಗಿಸಿ ನಂತರ ಕುರುಗೋಡಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಿದ್ದಾರೆ.

ನಂತರ ಕುರುಗೋಡು ಪೊಲೀಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತ ಪಟ್ಟ ಹಿರಿಯ ಪುತ್ರ ಮಣಿಕಂಠ (14) ಕುರುಗೋಡಿನ ಬೈಲೂರು ಗ್ರಾಮದ ಶಾರದ ಆಂಗ್ಲ ಮಾಧ್ಯಮ ಶಾಲೆ ಯಲ್ಲಿ ವಿದ್ಯಾಭ್ಯಾಸ ಪಡಿಯುತಿದ್ದ, ಕೊನೆ ಪುತ್ರ ಹರ್ಷ ವರ್ದನ (9) ಬಳ್ಳಾರಿ ಯ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾಭ್ಯಾಸ ಪಡಿಯುತಿದ್ದ ಇನ್ನೂ ಎರಡನೇ ಪುತ್ರ ಅರ್ಜುನ್ ಹೊಸಪೇಟೆ ಯಲ್ಲಿ ವಿದ್ಯಾಬ್ಯಾಸ ಪಡಿಯುತ್ತಿದ್ದಾನೆ.

ಈ ಬಾಲಕರ ತಾಯಿ ಲಕ್ಷ್ಮಿ ಮೃತ ಪಟ್ಟು 4 ವರ್ಷ ವಾಗಿದ್ದು, ತಂದೆ ಮಲ್ಲಿಕಾರ್ಜುನ ಎರಡನೇ ಮದುವೆ ಯಾಗಿದ್ದಾನೆ. ಎರಡನೇ ಪತ್ನಿಗೆ ಮಕ್ಕಳು ಇನ್ನೂ ಆಗಿಲ್ಲ.

ಗುತ್ತಿಗನೂರು  ಗ್ರಾಮದ ಚೌಡಿಕಿ ಕುಟುಂಬಕ್ಕೆ ಸೇರಿದ ಮಣಿಕಂಠ (14), ಹರ್ಷವರ್ಧನ (9) ಮೃತ ಪಟ್ಟ ಬಾಲಕರು. ಗ್ರಾಮದ ಒಂದೇ ಕುಟುಂಬಕ್ಕೆ ಸೇರಿದ ಇಬ್ಬರು ಪುತ್ರರು.

ಈ ಕುರಿತು ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *