ಪಣಜಿ : ಗೋವಾದ ವಿಧನಾಸಭಾ ಚುನಾವಣೆ ಮುಗಿದಿದೆ. ಇದೇ ತಿಂಗಳ 10ರಂದು ಚುನಾವಣೆಯ ಫಲಿತಾಂಶ ಹೊರಬೀಳಲಿದೆ. ಆದ್ರೆ ಈ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಗೆ ಶಾಸಕರು ಇನ್ಯಾವುದೋ ಪಕ್ಷಕ್ಕೆ ಹೋಗುವ ಭಯ ಶುರುವಾಗಿದೆ. ಹೀಗಾಗಿಯೇ ಶಾಸಕರ ರಕ್ಷಣೆಯ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೆಗಲಿಗೆ ಹೊರಿಸಿದ್ದಾರೆ.
ಇದೇ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಗೋವಾಗೆ ತೆರಳಲಿದ್ದಾರೆ. ಎಐಸಿಸಿ ಸೂಚನೆ ಮೇರೆಗೆ ಗೋವಾಗೆ ತೆರಳಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈತಪ್ಪದಂತೆ ನೋಡಿಕೊಳ್ಳಲು ಎಚ್ಚರಿಕೆಯ ಸೂಚನೆ ನೀಡಲಾಗಿದೆ. ಗೋವಾದಲ್ಲಿ ನೂತನ ಶಾಸಕರ ರಕ್ಷಣೆಯ ಜವಬ್ದಾರಿ ಡಿಕೆಶಿಗೆ ನೀಡಲಾಗಿದೆ.
ಈಗಾಗಲೇ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳದಲ್ಲಿ ಇರಿಸಿರುವ ಡಿ ಕೆ ಶಿವಕುಮಾರ್, ಇಂದು ಭೇಟಿ ನೀಡಿ ಅವರನ್ನ ಸುರಕ್ಷಿತವಾಗಿ ನೋಡಿಕೊಳ್ಳಲಿದ್ದಾರೆ. ಚುನಾವಣೋತ್ತರ ಸಮೀಕ್ಷೆ ಹೇಳುವಂತೆ ಈ ಬಾರಿ ಗೋವಾದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎನ್ನಲಾಗಿದೆ. ಆದ್ರೆ ಮಾರ್ಚ್ 10 ರಂದು ಫಲಿತಾಂಶ ಏನಾಗಲಿದೆ ಎಂಬುದು ತಿಳಿಯಲಿದೆ. ಇದೇ ಭಯ ಪಕ್ಷಗಳಿಗೆ ಕಾಡ್ತಿದೆ.