ನವದೆಹಲಿ: ಗೋ ಫಸ್ಟ್ ಎಂಬ ವಿಮಾನ ದೆಹಲಿಗೆ ಪ್ರಯಾಣ ಬೆಳೆಸಿತ್ತು. ಜನವರಿ 9ರಂದು ಪ್ರಯಾಣ ಬೆಳೆಸಿತ್ತು. ಬೆಳಗ್ಗೆ ಸಮಯದಲ್ಲಿ ವಿಮಾನ ಹೊರಟಿತ್ತು. ಆದರೆ ಈ ವೇಳೆ ವಿಮಾನ 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು. ಇದೀಗ ಆ ತಪ್ಪಿಗೆ ಇದೀಗ ಹತ್ತು ಲಕ್ಷ ದಂಡ ಕಟ್ಟಿದೆ ಗೋ ಫಸ್ಟ್ ವಿಮಾನ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ಗೋ ಫಸ್ಟ್ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಿದೆ.
ಸಂವಹನ, ಸಮನ್ವಯದ ಕೊರತೆ ಹಾಗೂ ದೃಢಪಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಈ ಲೋಪ ಸಂಭವಿಸಿದೆ. ಈ ನಿರ್ಲಕ್ಷ್ಯಕ್ಕೆ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಅಂತ ಹೇಳಿ, ಡಿಜಿಸಿಎ ನೋಟೀಸ್ ನೀಡಿದೆ. ಗೋ ಫದ್ಟ್ ನ ಅಕೌಂಡೆಬಲ್ ಮ್ಯಾನೇಜರ್ ಗೆ ಈ ನೋಟಿಸ್ ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶ ಕೂಡ ನೀಡಿತ್ತು.
ಇನ್ನಿ ಸಿಬ್ಬಂದಿಯಿಂದ ಆದ ಅಚಾತುರ್ಯಕ್ಕೆ ಗೋ ಫಸ್ಟ್ ವಿಮಾನಯ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯನ್ನು ಕೇಳಿತ್ತು. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿರುವುದಾಗಿಯೂ ತಿಳಿಸಿತ್ತು. ಆದರೆ ಸಂಸ್ಥೆಯ ತಪ್ಪಿಗೆ ಹತ್ತು ಲಕ್ಷ ದಂಡ ವಿಧಿಸಲಾಗಿದೆ.