ಕೆಲವೊಂದು ಪ್ಲಾಟ್ ಫಾರ್ಮ್ ಬಳಕೆ ಮಾಡುವುದಕ್ಕೆ ಆರಂಭಿಸಿ ಬಹಳ ವರ್ಷಗಳೇ ಕಳೆದಿವೆ. ಜನ ಕೂಡ ಅವುಗಳನ್ನು ಬಿಟ್ಟಿರಲಾರದಷ್ಟು ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಜಿಮೇಲ್ ಬಳಕೆ ಮಾಡದವರೇ ಹೆಚ್ಚು. ಎಲ್ಲಾ ವ್ಯವಹಾರಕ್ಕೂ ಜಿಮೇಲ್ ಬಳಕೆ ಮಾಡುತ್ತಾರೆ. ಒಂದು ವೇಳೆ ಜಿಮೇಲ್ ಸೇವೆ ಸ್ಥಗಿತಗೊಂಡರೆ ಏನು ಮಾಡುವುದು. ವ್ಯವಹಾರಗಳು ನಡೆಯುವುದು ಹೇಗೆ ಎಂಬೆಲ್ಲಾ ಪ್ರಶ್ನೆಗಳು ಎದುರಾಗುತ್ತವೆ. ಈ ಪ್ರಶ್ನೆಗಳು ಬರುವುದಕ್ಕೆ ಕಾರಣ, ಇತ್ತಿಚೆಗೆ ಜಿಮೇಲ್ ಸೇವೆ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಹರಿದಾಡಿದ್ದೇ ಆಗಿದೆ.
ಕಳೆದ ಮೂರ್ನಾಲ್ಕು ದಿನದಿಂದ ಜಿಮೇಲ್ ಸೇವೆ ಸ್ಥಗಿತಗೊಳ್ಳಲಿದೆ ಎಂಬ ವಿಚಾರ ಬಾರೀ ಚರ್ಚೆಗೆ ಗ್ರಾಸವಾಗಿತ್ತು. ಸರ್ಚ್ ಇಂಜಿನ್ ತನ್ನ ಮೇಲ್ ಸೇವೆಯನ್ನು ನಿಲ್ಲಿಸುತ್ತಿದೆ ಎಂಬ ಮಾತು ಕೇಳಿ ಬಂದಿತ್ತು. ಇದು ಸಹಜವಾಗಿಯೇ ಮೇಲ್ ಸೇವೆಯನ್ನು ಪ್ರತಿದಿನ ಬಳಕೆ ಮಾಡುವವರಿಗೆ ಆತಂಕಕ್ಕೆ ಈಡು ಮಾಡಿತ್ತು. ಮೇಲ್ ಸೇವೆ ಇಲ್ಲದೆ ಹೋದರೆ ಅದಕ್ಕೆ ಪರ್ಯಾಯವಾಗಿ ಏನು ಮಾಡುವುದು ಎಂಬೆಲ್ಲಾ ತಲೆ ನೋವುಗಳು ಶುರುವಾಗಿತ್ತು. ಆಗಸ್ಟ್ 1-2024ರಿಂದ ಸಂಪೂರ್ಣ ಸೇವೆ ಸ್ಥಗಿತಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದರೆ ಅದಕ್ಕೆ ಈಗ ಸ್ಚತಃ ಜಿಮೇಲ್ ಸಂಸ್ಥೆಯೆ ಉತ್ತರ ನೀಡಿದೆ.
G-mail ಸ್ಥಗಿತಗೊಳ್ಳುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆ, ಜಿಮೇಲ್ ಸೇವೆ ಸ್ಥಗಿತಗೊಳಿಸುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ಇದರಿಂದ ಬಳಕೆದಾರರು ನಿರಾಳರಾಗಿದ್ದಾರೆ. ಒಂದು ವೇಳೆ ಜಿಮೇಲ್ ಸೇವೆ ಸ್ಥಗಿತಗೊಂಡರೆ ಕೋಟ್ಯಾಂತರ ಬಳಕೆದಾರರು ಸಂಕಷ್ಟಕ್ಕೆ ಸಿಲುಕುತ್ತಾರೆ. ಕಚೇರಿಗಳಲ್ಲಿ ಎಷ್ಟೋ ಕೆಲಸಗಳೂ ನಡೆಯುತ್ತಿರುವುದೇ ಜಿಮೇಲ್ ಮೂಲಕ. ಹೀಗಾಗಿ ಮೇಲ್ ಸೇವೆ ಬಹಳ ಮುಖ್ಯ ಪಾತ್ರವಹಿಸಲಿದೆ.