ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಅಧ್ಯಕ್ಷ ಸ್ಥಾನದ ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ಮೊನ್ನೆಯಷ್ಟೇ ಡಿಕೆ ಸುರೇಶ್ ಅವರು, ಇದೇ ವಿಚಾರಕ್ಕೆ ಮಾತನಾಡಿದ್ದರು. ಅದ್ಯಕ್ಷ ಸ್ಥಾನದ ಆಸೆಯನ್ನ ಡಿಕೆ ಶಿವಕುಮಾರ್ ಅವರು ಇಟ್ಟುಕೊಂಡಿಲ್ಲ ಎಂದಿದ್ದರು. ಇದೀಗ ಡಿಕೆ ಶಿವಕುಮಾರ್ ಅವರೇ ಆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ.
ನಾನು ಪರ್ಮನೆಂಟ್ ಆಗಿ ಇರುವುದಕ್ಕೆ ಆಗಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾಗಿ ಐದೂವರೆ ವರ್ಷವಾಯಿತು. ಇನ್ನೂ ಸ್ವಲ್ಪ ದಿನ ಕಳೆದರೆ ಆರು ವರ್ಷವಾಗುತ್ತರ. ಡಿಸಿಎಂ ಆದ ತಕ್ಷಣವೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಬೇಕೆಂದು ನಿರ್ಧರಿಸಿದ್ದೆ. ಆದರೆ ರಾಹುಲ್ ಗಾಂಧು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯಿರಿ ಎಂದು ಹೇಳಿದ್ದರು. ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು.
ನಾನು ಎಲ್ಲಿರುತ್ತೇನೋ ಎಲ್ಲಿ ಇರುವುದಿಲ್ಲವೋ ಎನ್ನುವುದು ಮುಖ್ಯ ಅಲ್ಲ. 2028ಕ್ಕೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕರ ಬರಬೇಕು ಎಂಬುದೇ ನಮ್ಮ ಉದ್ದೇಶ. ಪವರ್ ವಿಚಾರ ಮುಖ್ಯ ಅಲ್ಲ, ಶ್ರಮಕ್ಕೆ ಫಲ ಸಿಗುತ್ತದೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇದೆ . ಎಲ್ಲಿ ಭಕ್ತಿ ಇದೆಯೋ ಅಲ್ಲಿ ಫಲ ಇದೆ. ನಾನು ಅಧಿಕಾರದಲ್ಲಿ ಇರುತ್ತೇನೋ ಇರಲ್ವೋ ಅದು ಇಂಪಾರ್ಟೆಂಟ್ ಅಲ್ಲ . ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು . ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು ಎಂಬುದಷ್ಟೇ ಮುಖ್ಯ. ಪರ್ಮನೆಂಟ್ ಆಗಿ ಮುಂದುವರಿಯೋಕಾಗಲ್ಲ . ಕೆಲವರು ಪಕ್ಷದ ಕಚೇರಿಯನ್ನೇ ಮರೆತುಬಿಟ್ಟಿದ್ದಾರೆ . ಪಕ್ಷ ಅಂದ್ರೆ ದೇವಸ್ಥಾನ ಎನ್ನುವುದನ್ನೇ ಕೆಲವರು ಮರೆತಿದ್ದಾರೆ . ಯಾರೂ ನೂರು ಕೆಪಿಸಿಸಿ ಕಟ್ಟಡ ಕಟ್ಟಲು ಆಸಕ್ತಿ ವಹಿಸಲ್ಲ ಅಂಥವರ ಪಟ್ಟಿ ನಾನು ಹೈಕಮಾಂಡ್ ಗೆ ನೀಡುತ್ತೇನೆ . ಅವರಿಗೆಲ್ಲ ನಾನು ಉತ್ತರ ಕೊಡೋದಕ್ಕೆ ಹೋಗಲ್ಲ, ಎಲ್ಲದಕ್ಕೂ ದೆಹಲಿಯವರೇ ಉತ್ತರ ಕೊಡ್ತಾರೆ ಎಂದಿದ್ದಾರೆ.






