ನಮಗೆ ಬಂದೂಕು ಕೊಡಿ : ಸದನದಲ್ಲಿ ಕೇಳಿದ ಆರಗ ಜ್ಞಾನೇಂದ್ರ

1 Min Read

ಬೆಂಗಳೂರು: ನನ್ನ ಕ್ಷೇತ್ರ ಮಲನಾಡಿನ ಕ್ಷೇತ್ರ. ನಮ್ಮಲ್ಲಿ ಇಷ್ಟೊಂದು ಕಳ್ಳತನಗಳು ಇರಲಿಲ್ಲ. ಯಾಕಂದ್ರೆ ಕದಿಯೋಕೆ ಬಂದವರಿಗೆ ದಾರಿ ಗೊತ್ತಾಗ್ತಾ ಇರಲಿಲ್ಲ. ಬಂದೂಕುಗಳನ್ನ ನಮಗೆ ಲೈಸೆನ್ಸ್ ಕೊಡ್ತಾ ಇದ್ದರು. ಒಂದೊಂದೆ ಮನೆ ಬಳಿ ಬರೋದಕ್ಕೆ ಹೆದರ್ತಾ ಇದ್ದರು. ಈಗ ಬಂದೂಕು ಲೈಸೆನ್ಸ್ ಅನ್ನ ನಿರಾಕರಿಸ್ತಾ ಇದ್ದಾರೆ. ನಾವೇನ್ ಬಂದೂಕಲ್ಲಿ ಒಂದು ಹಕ್ಕಿ ಕೂಡ ಹೊಡೆಯಲ್ಲ. ಬಂದೂಕು ಇಟ್ಟುಕೊಂಡಿದ್ದೀವಿ ಅಂತ ಹೆದರ್ತಾ ಇದ್ದರು. ನಮಗೆ ಬಂದೂಕು ಲೈಸೆನ್ಸ್ ರಿನಿವಲ್ ಮಾಡಿಕೊಟ್ಟು, ಬಂದೂಕನ್ನ ಕೊಡಬೇಕು ಎಂದು ಸದನದಲ್ಲಿ ಆರಗ ಜ್ಞಾನೇಂದ್ರ ಕೇಳಿದ್ದಾರೆ. ಕಳ್ಳತನದ ವಿಚಾರಕ್ಕೆ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

 

ಆರಗ ಜ್ಞಾನೇಂದ್ರ ಅವರು ಈ ಹಿಂದೆ ಗೃಹ ಸಚಿವರಾಗಿದ್ದವರು. ಬಹುಶಃ ಎಲ್ಲಾ ವಿಚಾರಗಳು ಅವರಿಗೆ ಗೊತ್ತಿದೆ. ಅವರು ಗೃಹ ಸಚಿವರಾಗಿದ್ದಾಗಿನಿಂದ ಇಲ್ಲಿಯವರೆಗೂ ಅಷ್ಟೇನು ಬದಲಾವಣೆಯಾಗಿಲ್ಲ. ಒಂದಷ್ಟು ಕಳ್ಳತನ ಜಾಸ್ತಿಯಾಗಿರಬಹುದು, ಕಡಿಮೆಯೂ ಆಗಿರಬಹುದು. ಆದರೆ ವ್ಯವಸ್ಥೆ ಬದಲಾವಣೆ ಆಗಿದೆ ಅಂತ ಅನ್ನಿಸ್ತಾ ಇಲ್ಲ. ಹೀಗಾಗಿ ಎಲ್ಲವೂ ನಿಮಗೆ ಗೊತ್ತಿದೆ.

ಶಿವಮೊಗ್ಗದಲ್ಲಿ 33 ಪೊಲೀಸ್ ಸ್ಟೇಷನ್ಸ್ ಇದೆ. ತಮ್ಮ ಕ್ಷೇತ್ರದಲ್ಲಿ 6 ಪೊಲೀಸ್ ಸ್ಟೇಷನ್ಸ್ ಇದೆ. ಮೂರು ಔಟ್ ಪೋಸ್ಟ್ ಇದೆ. ಅಂಕಿ ಅಂಶಗಳನ್ನ ನೋಡಿದ್ರೆ ತುಂಬಾ ಆತಂಕ ಪಡುವಂತದ್ದೇನು ಇಲ್ಲ. ವರ್ಷದಲ್ಲಿ 14 ಕಳ್ಳತನವಾಗಿದೆ ಅಂದ್ರೆ ಕಡಿಮೆ ಅನ್ಸುತ್ತೆ. ಯಾಕಂದ್ರೆ ಈ ಹಿಂದಿನ ಅಂಕಿ ಅಂಶಗಳನ್ನ ಕೊಡೋದಕ್ಕೆ ಹೋಗಿಲ್ಲ ನಾನು. ಏನೆಲ್ಲಾ ಕ್ರಮ ತೆಗೆದುಕೊಳ್ಳಬೇಕೋ ಅದೆಲ್ಲವನ್ನು ತೆಗೆದುಕೊಳ್ತಾ ಇದ್ದೀವಿ. ಅದು ತಮಗೂ ಗೊತ್ತಿದೆ. 30 ಸಾವಿರ ಸಿಸಿಟಿವಿ ಇಡೀ ಜಿಲ್ಲೆಗೆ ಹಾಕಿಸಲಾಗಿದೆ. 16 ಸಾವಿರ ಶಿವಮೊಗ್ಗ ಸಿಟಿಯಲ್ಲಿಯೇ ಇದೆ. ತೀರ್ಥಹಳ್ಳಿಯಲ್ಲಿ 3 ಸಾವಿರ ಸಿಸಿಟಿವಿ ಇದೆ. ನೀವೀದ್ದಾಗಲೇ ಹಾಕ್ಸಿದ್ದೀರಾ ಗೊತ್ತಿಲ್ಲ. ಕ್ರಮ ತೆಗೆದುಕೊಳ್ಳಬೇಕಾದರೆ ಯಾವುದೇ ನಿರ್ಲಕ್ಷ್ಯ ಆಗಿದೆ ಅಂತ ನನಗೆ ಅನ್ಸಲ್ಲ. ಏನೇನ್ ಕ್ರಮ ತೆಗೆದುಕೊಂಡಿದ್ದೀವಿ ಎಂಬುದನ್ನ ಸ್ವವಿವರವಾಗಿ ಹೇಳಿದ್ದೀನಿ ಎಂದಿದ್ದಾರೆ.

Share This Article