ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಪ್ರಕರಣ ಈಗಲೂ ಎಲ್ಲರ ಕಣ್ಣಿಗೆ ಕಟ್ಟಿದಂತೆ ಇದೆ. ಕಳೆದ ವರ್ಷ ಕಾಲೇಜಿನಿಂದ ಬರ್ತಾ ಇದ್ದಂತ ನೇಹಾ ಹಿರೇಮಠಳನ್ನ ಫಯಾಜ್ ಎಂಬಾತ ಚುಚ್ಚಿ ಚುಚ್ಚಿ ಕೊಂದಿದ್ದ. ಸದ್ಯ ಆತ ಜೈಲಿನಲ್ಲಿದ್ದು, ನಾಳೆ ಕೋರ್ಟ್ ನಲ್ಲಿ ಕೇಸ್ ನಡೆಯಲಿದೆ. ಹೀಗಾಗಿ ಫಯಾಜ್ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದು ದರ್ಶನ್ ಗೆ ನೀಡಿದಂತೆ ನನಗೂ ಜಾಮೀನು ನೀಡಿ ಅಂತ ಮನವಿ ಮಾಡಿದ್ದಾರೆ.
ಈ ಸಂಬಂಧ ನೇಹಾ ಹಿರೇಮಠ ಅವರ ತಂದೆ ನಿರಂಜನಯ್ಯ ಹಿರೇಮಠ ಅವರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಸಮಸ್ಯೆಯ ಬಗ್ಗೆ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ನಿರಂಜನಯ್ಯ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಯಾವಾಗಲೂ ನಮ್ಮ ಬೆನ್ನಿಗೆ ನಿಂತವರು. ನೇಹಾ ಹಿರೇಮಠ ಕೊಲೆ ಪ್ರಕರಣದ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೀನಿ ಎಂದಿದ್ದಾರೆ.
ನಾಳೆ ಆರೋಪಿಯ ಜಾಮೀನು ಆದೇಶ ಇರೋದ್ರಿಂದ ಮಾಹಿತಿ ಕೊಡುವುದಕ್ಕೆ ಬಂದಿದ್ದೆ. ಜಾಮೀನು ಆದೇಶ ವರಲಿ. ಆ ನಂತರ ನಾನು ನೋಡೋಣಾ ಅಂದಿದ್ದಾರೆ. ಜಾಮೀನು ಕೊಡಲ್ಲ ಅಂತ ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ವಾಮ ಮಾರ್ಗದಲ್ಲಿ ಅವರು ಬಂದಿದ್ದಾರೆ. ನಮ್ಮ ವಕೀಲರು ಸಹ ವಾದ ಮಂಡಿಸಿದ್ದಾರೆ. ನಾಳೆಯ ಆದೇಶಕ್ಕೆ ನಾವೂ ಸಹ ಕಾಯ್ತಾ ಇದ್ದೇವೆ. ಪಯಾಜ್ ಗೆ ಜಾಮೀನು ಸಿಕ್ಕರೆ ಹೈಕೋರ್ಟ್ ಗೆ ಹೋಗ್ತೇವೆ. ನಟ ದರ್ಶನ್ ಗೆ ನೀಡಿದಮನತೆ ನಮಗೂ ಜಾಮೀನು ನೀಡಿ ಅನ್ನೋ ಡಿಮ್ಯಾಂಡ್ ಇಟ್ಟಿದ್ದಾರೆ. ದರ್ಶನ್ ಬೇಲ್ ರೀತಿ ಈ ಕೇಸಲ್ಲಿ ಕೇಳೋದು ಸರಿಯಲ್ಲ ಎಂದಿದ್ದಾರೆ.
