ಬಾಗಲಕೋಟೆ: 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಈಗಾಗಲೇ ಎರಡನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಬಾರಿ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಅಳೆದು, ತೂಗಿ, ಅಭ್ಯರ್ಥಿಗಳ ಬಲಾ, ಬಲಾಢ್ಯತೆಯನ್ನು ಗಮನಿಸಿ ಟಿಕೆಟ್ ಕೊಟ್ಟಿದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ ಹಲವರಿಗೆ ಟಿಕೆಟ್ ಸಿಕ್ಕಿಲ್ಲ. ಟಿಕೆಟ್ ಸಿಗದವರು ಈಗಾಗಲೇ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಅದರಲ್ಲಿ ನಟಿ ಉಮಾಶ್ರೀ ಕೂಡ ಒಬ್ಬರು. ಈ ಬಾರಿ ತೇರದಾಳ ಕ್ಷೇತ್ರಕ್ಕೆ ಉಮಾಶ್ರೀ ಅವರ ಹೆಸರು ರಿಜಿಸ್ಟರ್ ಆಗಿಲ್ಲ. ಹೀಗಾಗಿ ಉಮಾಶ್ರೀ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಆದರೆ ತೇರದಾಳ ಕ್ಷೇತ್ರಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟಕ್ಕೂ ಸ್ವಾಮೀಜಿಗಳು ಆ ರೀತಿ ಪಟ್ಟು ಹಿಡಿಯಲು ಕಾರಣವಾದರೂ ಏನು..? ಅಭಿನವ ರೇವಣ್ಣ ಸಿದ್ದೇಶ್ವರ ಶ್ರೀ, ಮೃತ್ಯುಂಜಯ ಶ್ರೀ, ಪಂಎಇತ್ ಪಟ್ಟಣ್ ಶ್ರೀ, ಮಲ್ಲಪ್ಪ ಬಾವಿಕಟ್ಟೆ ಹಾಗೂ ಚಂದ್ರಶೇಖರ ಶಿವಪೂಜಿ ಶ್ರೀಗಳು ಈ ರೀತಿ ಒತ್ತಾಯ ಮಾಡುತ್ತಿದ್ದಾರೆ.
ಸ್ವಾಮೀಜಿಗಳೆಲ್ಲಾ ಈ ಬಾರಿಯ ವಿಧಾನಸಭಾ ಚುನಾವಣೆಗೆ ಡಾ ಮಲ್ಲೇಶಪ್ಪ ಎಸ್ ದಡ್ಡೇನವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಟಿ ನಡೆಸಿ, ತೇರದಾಳದಲ್ಲಿ 60 ಸಾವಿರ ಹಟಗಾರ ಲಿಂಗಾಯತರಿದ್ದಾರೆ. ಬಹಳ ವರ್ಷದಿಂದಾನೂ ಕಾಂಗ್ರೆಸ್ ಜೊತೆಗೆ ಇದೆ. ಉಮಾಶ್ರೀ ಅವರಿಗೆ ಟಿಕೆಟ್ ನೀಡಿದರೆ ನಮಗೆ ಅಭ್ಯಂತರವೇನು ಇಲ್ಲ. ಆದರೆ ಅವರು ಗೆದ್ದು ಈಗಾಗಲೇ ಸಚಿವೆಯಾಗಿದ್ದಾರೆ. ಯುವಕರಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.