ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವಂಬರ್. 07 : ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜಕ್ಕೆ ಎಸ್ಸಿ. ಮೀಸಲಾತಿ ನೀಡಬೇಕು. ನಮ್ಮ ಮೇಲೆ ಜಾತಿನಿಂದನೆ ಮಾಡುವವರ ವಿರುದ್ದ ಕೇಸು ದಾಖಲಿಸುವಂತೆ ಕಾಯಿದೆ ಜಾರಿಗೆ ತರಬೇಕೆಂದು ಜಿಲ್ಲಾ ಹಾಗೂ ತಾಲ್ಲೂಕು ಸವಿತಾ ಸಮಾಜದಿಂದ ಮಂಗಳವಾರ ಅಪರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಕುಲಕಸುಬನ್ನೆ ನೆಚ್ಚಿಕೊಂಡು ಇಂದಿಗೂ ಬದುಕುತ್ತಿರುವ ಸವಿತಾ ಸಮಾಜ ಕೊರೋನಾ ಸಂದರ್ಭದಲ್ಲಿ ದುಡಿಮೆಯಿಲ್ಲದೆ ಸಾಕಷ್ಟ ಸಂಕಟ ಎದುರಿಸಬೇಕಾಯಿತು. ಹಾಗಾಗಿ ನಮ್ಮ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಈ ಹಿಂದೆಯೂ ಮನವಿ ಮಾಡಿಕೊಂಡಿದ್ದರೂ ರಾಜ್ಯ ಸರ್ಕಾರದಿಂದ ಸ್ಪಂದನೆಯಿಲ್ಲ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವಂತೆ ವಿನಂತಿಸಿದರು.
ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಆರ್.ಶ್ರೀನಿವಾಸ್, ಎನ್.ಶ್ರೀನಿವಾಸ್, ನಾಗರಾಜು, ಘನಶ್ಯಾಂ, ರಂಜಿತ, ಬೆಳಗಟ್ಟ ಶ್ರೀನಿವಾಸ್, ಧರ್ಮಣ್ಣ, ಸಾಯಿನಾಥ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.