Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಆರೋಗ್ಯಕ್ಕೆ ಹೆಚ್ಚು‌ಒತ್ತು ನೀಡಿ : ಶಾಸಕ ಟಿ.ರಘುಮೂರ್ತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ಕೋಟಿ ಕೋಟಿ ಹಣ ಇದ್ದರೇನು ? ಆರೋಗ್ಯ ಮುಖ್ಯ! ಹಣದಿಂದ ಆರೋಗ್ಯವನ್ನು ಖರೀದಿಸಲು ಸಾಧ್ಯವಿಲ್ಲ. ಆರೋಗ್ಯವಿದ್ದರೆ, ನಾವು ನಮ್ಮ ಹಣವನ್ನು ಸಂತೋಷದಿಂದ ಬಳಸಬಹುದು, ಆದರೆ ಆರೋಗ್ಯವಿಲ್ಲದಿದ್ದರೆ, ಹಣದ ಮೌಲ್ಯವೇ ಇಲ್ಲ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

 

ಚಳ್ಳಕೆರೆ ತಾಲ್ಲೂಕಿನ ನಗರಂಗೆರೆ ಗ್ರಾಮದ ಮರಿಕಾಂಬ ದೇವಸ್ಥಾನ ಮುಂಭಾಗದಲ್ಲಿ ನಗರಂಗೆರೆ ಗ್ರಾಮ ಅಭಿವೃದ್ಧಿ ಹಾಗು ದೇವಾಲಯಗಳ ನಿರ್ಮಾಣ ಸೇವಾ ಟ್ರಸ್ಟ್, ನಗರಂಗೆರೆ ಗ್ರಾಮ ಪಂಚಾಯಿತಿ ಹಿತರಕ್ಷಣಾ ವೇದಿಕೆ, ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ನ್ಯೂಬರ್ಗ ವಾಸವಿ ಲ್ಯಾಬ್, ಮೂರ್ತಿ ಇಂಡಸ್ಟಿಸ್.ಅಂಡ ಡೆವಲಪ್‌ಮೆಂಟ್ ಗ್ರೂಪ್ ನಗರ ಇವರ ಸಂಯುಕ್ತ ಆಶಯದಲ್ಲಿ ಸೂಪರ್ ಸ್ಪೆಷಲ್ ಉಚಿತ ಆರೋಗ್ಯ ತಪಾಸಣೆ ಶಿಬಿರದ ದಲ್ಲಿ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ ನಂತರ ಮಾತನಾಡಿದಾವರು.

 

ಆರೋಗ್ಯವು ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯವಾದ ಅಂಶವಾಗಿದೆ. ಆರೋಗ್ಯವಿದ್ದರೆ, ನಾವು ನಮ್ಮ ಕನಸುಗಳನ್ನು ನನಸಾಗಿಸಬಹುದು, ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು. ಇತ್ತೀಚಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಊಟ ಸೇವನೆ , ಕೆಲಸದ ಒತ್ತಡದಲ್ಲಿ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ ದೇಹಕ್ಕೆ ಶ್ರಮ ಇಲ್ಲಾ ಅರೋಗ್ಯ ಸರಿ ಇಲ್ಲಾ ಎನ್ನುವಂತ್ತಾಗಿದೆ.

 

ಗ್ರಾಮೀಣ ಭಾಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಮಾಡಿರೋದು ಉತ್ತಮವಾದ ಕಾರ್ಯವಾಗಿದೆ . ಪ್ರತಿಯೊಬ್ಬರು ಈ ಉಚಿತ ಆರೋಗ್ಯ ಶಿಬಿರದ ಅನುಕೂಲವನ್ನು ಪಡೆದುಕೊಳ್ಳಿ ಎಂದರು.

 

ಜಯದೇವ ಹೃದ್ರೋಗ ಆಸ್ಪತ್ರೆಯ ನಿಕಟಪೂರ್ವ ನಿರ್ದೇಶಕರಾ.ಡಾ ರವೀಂದ್ರ ಮಾತನಾಡಿ ಆರೋಗ್ಯಕ್ಕಿಂತ ಭಾಗ್ಯ ಮತ್ತೊಂದ್ದಿಲ್ಲಾ ಆರೋಗ್ಯ ಸರಿ ಇಲ್ಲದಿದ್ದರೆ ಎಷ್ಟು ಹಣ ಇದ್ದರು ಏನ್ ಪ್ರಯೋಜನ ಅರೋಗ್ಯ ಬಗ್ಗೆ ಹೆಚ್ಚು ಕಳಜಿ ವಹಿಸಿಬೇಕು, ಸಿರಿದಾನ್ಯಗಳ ಆಹಾರಗಳನ್ನ ಸೇವನೆ ಮಾಡಬೇಕು, ಪಿಜಾ ಬರ್ಗರ್ ರಸ್ತೆ ಸಮೀಪ ತಿಂಡಿ, ಅತಿ ಹೆಚ್ಚ ಮಾಂಸ, ಸೇವನೆ ಆರೋಗ್ಯಕ್ಕೆ ಹನಿಕರ. ಸರಿಯಾದ ಸಮಯ ಕ್ಕೆಆಹಾರ ಸೇವೆ ಆರೋಗ್ಯ ಉತ್ತಮವಾಗಿದೆ .ಮತ್ತು ಅತಿ ಹೆಚ್ಚು ಮಾನಸಿಕ ಒತ್ತಡವು ಸಹ ಆರೋಗ್ಯ ಕ್ಕೆ ಹನಿಕರವಾಗುತ್ತದೆ. ನಿಯಮಿತ ಆಹಾರ ಸೇವೆ,,ವ್ಯಾಯಾಮ, ವಾಕ್ ಮಾಡುವುದರಿಂದ ಆರೋಗ್ಯವನ್ನ ಕಾಪಾಡಿಕೊಳ್ಳ ಬಹುದು ಎಂದರು.

 

ಶಿಮುಲು ಹಾಲು ಒಕ್ಕೂಟದ ನಿರ್ದೇಶಕರಾದ ಬಿಸಿ ಸಂಜೀವ್ ಮೂರ್ತಿ ಮಾತನಾಡಿ. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನಿಟ್ಟಿನಲ್ಲಿ ಈಗಾಗಲೇ ನಗರಂ ಗೆರೆ ಗ್ರಾಮದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಂತೆ ಇಂದು ಸುಮಾರು ನಗರಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ 9 ಗ್ರಾಮದ ಜನರಿಗೆ ಆರೋಗ್ಯ ಉಚಿತ ತಪಾಸಣೆ ಶಿಬಿರವನ್ನು ಅಮ್ಮಿಕೊಂಡಿದ್ದು ಸುಮಾರು 50 ನುರಿತ ತಜ್ಞ ವೈದ್ಯರಿಂದ ತಪಾಸಣೆ ಮತ್ತು ಚಿಕಿತ್ಸೆ ಹಾಗೂ ಮಾತ್ರೆ ಔಷಧಿಗಳನ್ನ ವಿತರಣೆ ಮಾಡಲಾಗಿದ್ದು 700 ಹೆಚ್ಚು ಶಿಬಿರಾರ್ಥಿಗಳು ಈ ಆರೋಗ್ಯ ತಪಾಸಣಾ ಶಿಬಿರದ ಅನುಕೂಲವನ್ನು ಪಡೆದುಕೊಂಡಿದ್ದಾರೆ. ಎಲ್ಲರ ಸಹಕಾರದಿಂದ ಇಂತಹ ಕಾರ್ಯವನ್ನು ಮಾಡಲು ಸಾಧ್ಯವಾಗಿದೆ ಎಂದರು.

 

ಡಾ.ನಾರಾಯಣ ಮೂರ್ತಿ, ಬಸವರಾಜ್, ವಾಸವಿ ಲ್ಯಾಬ್ ನ ಶ್ರೀನಿವಾಸ್ ಶೆಟ್ಟಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಉಚಿತ ಆರೋಗ್ಯ ತಪಾಸಣೆ ‌ಪ್ರಯೋಜಕ ಬಿಸಿ ವೆಂಕಟೇಶ, ಬಿ.ಸಿ.ಸತೀಶ ಕುಮಾರ್, ಪುಷ್ಪ ಸಂಜೀವಮೂರ್ತಿ ಕಾರ್ತಿಕ ಎಸ್.ಮೂರ್ತಿ ಬಿವಿ
ಚಿದಾನಂದ ಮೂರ್ತಿ, ಡಾ.ನಿರ್ಣಾಯ,ಡಾ.ತನ್ವಿತ,ಡಾ.ಅನ್ನಪೂರ್ಣ, ಸಂಚಲಾಕ ಅಜಮತ್ ವುಲ್ಲಾ ,ತಿಪ್ಪೇರುದ್ರ, ಶ್ರೀಧರ, ಜಗದೀಶ, ನಿಂಗಣ್ಣ,ಸೇರಿದಂತೆ ಆರೋಗ್ಯ ತಪಾಸಣೆ ಸಿಬಿರಾರ್ಥಿಗಳು ಹಾಗೂ ವೈದ್ಯರು ಮತ್ತು ಗ್ರಾಮಸ್ಥರು ಇದ್ದರು..

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now