ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಕೊಳಗೇರಿ ನಿವಾಸಿಗಳಿಗೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಹಕ್ಕುಪತ್ರಗಳನ್ನು ವಿತರಿಸಿದ್ದು, ಇ-ಸ್ವತ್ತು ಇಲ್ಲದ ಕಾರಣ ನೊಂದಣಿ ಮಾಡಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಕೂಡಲೆ ಖಾತೆ ಮಾಡಿ ಇ-ಸ್ವತ್ತು ನೀಡುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾಧ್ಯಕ್ಷ ಗಣೇಶ್ ಸೋಮವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಕೊಳಗೇರಿ ನಿವಾಸಿಗಳು ಇ-ಸ್ವತ್ತು ಕೇಳಿದರೆ ಕ್ರಯಪತ್ರವಿಲ್ಲದೆ ಇ-ಸ್ವತ್ತು ಕೊಡುವುದಿಲ್ಲವೆಂದು ನಗರಸಭೆಯವರು ಉತ್ತರಿಸುತ್ತಿದ್ದಾರೆ. ಕೂಡಲೆ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಹಾಗೂ ನಗರಸಭೆ ಪೌರಾಯುಕ್ತರ ಜಂಟಿ ಸಭೆ ನಡೆಸಿ ಕೊಳಗೇರಿಗಳಿಗೆ ಇ-ಸ್ವತ್ತು ಕೊಟ್ಟು ನೆಮ್ಮದಿಯ ಜೀವನ ನಡೆಸುವಂತ ಅವಕಾಶ ಕಲ್ಪಿಸುವಂತೆ ಗಣೇಶ್ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.



