ಹೆಣ್ಣು ಮಕ್ಕಳೇ ಚಿನ್ನದ ಆಸೆ ಬಿಟ್ಟು ಬಿಡಿ : ಗ್ರಾಂಗೆ 11,800 ದಾಟಿದ ಚಿನ್ನದ ಬೆಲೆ

1 Min Read

ಬೆಂಗಳೂರು: ಚಿನ್ನದ ದರ ನೋಡಿದ್ರೆ ತಲೆ ತಿರುಗಿ ಬೀಳಬೇಕು ಅಷ್ಟು ಏರಿಕೆಯಾಗ್ತಾ ಇದೆ. ಇಂದು 22 ಕ್ಯಾರಟ್ ನ ಒಂದು ಗ್ರಾಂಗೆ 50 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಇಂದು ಮಾರುಕಟ್ಟೆಯಲ್ಲಿ ಚಿನ್ನದ ದರ 22 ಕ್ಯಾರಟ್ ನ ಒಂದು ಗ್ರಾಂ 11,815 ರೂಪಾಯಿ ಆಗಿದೆ. 24 ಕ್ಯಾರಟ್ ಅಪರಂಜಿ ಚಿನ್ನ ಕೂಡ 54 ರೂಪಾಯಿ ಏರಿಕೆಯಾಗಿದ್ದು, ಈ ಮೂಲಕ 12,889 ರೂಪಾಯಿ ಆಗಿದೆ. 22 ಕ್ಯಾರಟ್ ಹತ್ತು ಗ್ರಾಂಗೆ 1,18,150 ರೂಪಾಯಿ ಆಗಿದೆ. ಹಾಗೇ 24 ಕ್ಯಾರಟ್ ಅಪರಂಜಿ ಚಿನ್ನ 1,28,150 ರೂಪಾಯಿ ಆಗಿದೆ.

 

ಬೆಂಗಳೂರು ಸೇರಿದಂತೆ ಬೇರೆ ಬೇರೆ ನಗರದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ, ಬೆಂಗಳೂರು, ಚೆನ್ನೈ, ಕೇರಳ, ಹೈದ್ರಾಬಾದ್, ಕೊಲ್ಕತ್ತಾ, ಮುಂಬೈ ನಗರದಲ್ಲಿ 11,815 ರೂಪಾಯಿ ಒಂದು ಗ್ರಾಂ ಚಿನ್ನದ ಬೆಲೆಯಾಗಿದೆ. ದಿಲ್ಲಿಯಲ್ಲಿ 11,830 ರೂಪಾಯಿ ಇದೆ. ಇನ್ನು ವಿದೇಶಗಳಲ್ಲಿ ಚಿನ್ನದ ದರ ಹೀಗಿದೆ. ದುಬೈನಲ್ಲಿ 10 ಗ್ರಾಂನ 22 ಕ್ಯಾರಟ್ ಚಿನ್ನ 11,066 ರೂಪಾಯಿ ಇದೆ. ಅಮೆರಿಕಾದಲ್ಲಿ 11,337 ಇದೆ. ಸೌದಿಯಲ್ಲಿ 11.033 ರೂಪಾಯಿ ಇದೆ.

ಬೆಳ್ಳಿ ಬೆಲೆಯಲ್ಲಿ ಚಿನ್ನಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಏರಿಕೆಯಾಗಿದೆ. 1.40 ಇಂದು ಏರಿಕೆಯಾಗಿದ್ದು, ಇಂದಿನ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಬೆಳ್ಳಿ ಬೆಲೆ 195 ರೂಪಾಯಿ ಇದೆ. ಹಾಗೇ 100 ಗ್ರಾಂ ಬೆಳ್ಳಿಯ ಬೆಲೆ 19,000 ರೂಪಾಯಿ ಆಗಿದೆ. ಕೆಜಿಗೆ 1,95,000 ಆಗಿದೆ.

Share This Article
Enable Notifications OK No thanks