ಶ್ರೀನಗರ: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಳಿಕ ಗುಲಾಂ ನಬಿ ಆಜಾದ್ ಮುಂದಿನ ನಡೆ ಏನಿರುತ್ತೆ ಎಂಬ ಕುತೂಹಲ ಎಲ್ಲರೊಳಗೂ ಇತ್ತು. ಬಳಿಕ ಹೊಸದೊಂದು ಪಕ್ಷ ಆರಂಭಿಸುವುದಾಗಿ ಅವರೇ ಹೇಳಿದ್ದರು. ಇದೀಗ ಹೊಸ ಪಕ್ಷದ ಘೋಷಣೆಯಾಗಿದೆ. ಆ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಕ್ಷ ಎಂದು ಹೆಸರಿಡಲಾಗಿದೆ.

ಕಾಂಗ್ರೆಸ್ ಬಿಟ್ಟ ಒಂದು ತಿಂಗಳ ಬಳಿಕ ಹೊಸ ಪಕ್ಷ ಘೋಷಣೆ ಮಾಡಿದ್ದು, ನಮ್ಮ ಪಕ್ಷಕ್ಕೆ ವಯಸ್ಸಿನ ಮಿತಿಯಿಲ್ಲ ಎಂಬುನ್ನು ಒತ್ತಿ ಹೇಳಿದ್ದಾರೆ. ಹಿರಿಯರು ಮತ್ತು ಯುವಕರು ಸೇರಿ ಈ ಪಕ್ಷವನ್ನು ಮುನ್ನಡೆಸುತ್ತಾರೆ ಎಂದಿದ್ದಾರೆ.

ಗುಲಾಂ ನಬಿ ಆಜಾದ್ ಕಾಂಗ್ರೆಸ್ ನಲ್ಲಿ ದಶಕಗಳ ಕಾಲ ಇದ್ದರು. ಆದರೆ ಆಗಸ್ಟ್ 26ರಂದು ಕಾಂಗ್ರೆಸ್ ತೊರೆದರು. ಗುಲಾಬ್ ನಬಿ ಆಜಾದ್ ರಾಜೀನಾಮೆ ಎಲ್ಲರಿಗೂ ಅಚ್ಚರಿಯುಂಟು ಮಾಡಿತ್ತು. ಬೇರೆ ಪಕ್ಷಕ್ಕೆನಾದರೂ ಸೇರ್ಪಡೆಯಾಗಲಿದ್ದಾರಾ ಎನ್ನಲಾಗುತ್ತಿತ್ತು. ಆದರೆ ಗುಲಾಂ ನಬಿ ಹೊಸ ಪಕ್ಷವನ್ನೇ ಆರಂಭಿಸಿದ್ದಾರೆ.


