ಶಿವಮೊಗ್ಗ : ಇಂದು ಗೀತಾ ಶಿವರಾಜ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ್ದು, ಶಿವಣ್ಣ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮಾತನಾಡಿದ್ದು, ನಾನು ನಾಮಪತ್ರ ಸಲ್ಲಿಸಲು ಎರಡನೇ ಬಾರಿ ಬಂದಿದ್ದೆನೆ. ಈ ಹಿಂದೆ ಕೂಡ ಬಂದಿದ್ದೆ. ವಾತಾರಣ ಚೆನ್ನಾಗಿದೆ. ಗೀತಾ ಅವರಿಗೆ ಅಲ್ ದಿ ಬೆಸ್ಟ್ ಹೇಳುತ್ತೆನೆ. ಜನರಿಗೆ ಬದಲಾವಣೆ ಬೇಕು ಎನ್ನಿಸಿದೆ. ನಾವು ಎಲ್ಲಾ ಕಡೆ ಪ್ರಚಾರ ಮಾಡ್ತಾ ಇದ್ದೇವೆ. ಎಲ್ಲಿ ಹೋದರು ನಮಗೆ ಪಾಸಿಟಿವ್ ಕಾಣಿಸುತ್ತಿದೆ.

ನಾನು ಹೋದಲೆಲ್ಲಾ ಹಾಡು, ಡೈಲಾಗ್ ಕೇಳುತ್ತಾರೆ. ಸಿನಿಮಾ ನೋಡುವವರು, ಮತ ಹಾಕುವವರು ಅವರೆ. ಅವರ ಸಂತೋಷಕ್ಕೆ ನಾನು ಹಾಡು ಡೈಲಾಗ್ ಹೇಳುತ್ತೇನೆ. ಅಲ್ಲಿ ಯಾವ ವಯಸ್ಸಿನವರಿಗೆ ಹೇಗೆ ಮಾತನಾಡಬೇಕೂ ಹಾಗೆ ಮಾತನಾಡುತ್ತೇನೆ. ನಾನು ನನ್ನ ಪತ್ನಿ ಗೆ ಒಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ.
ಗೀತಾ ಯಾವಾಗಾಲೂ ಸಾಫ್ಟ್. ರಾಜಕೀಯಕ್ಕೆ ರಫ್ ಆಗಿ ಇರಬಾರದು. ರಾಜಕೀಯಕ್ಕೆ ಸಾಫ್ಟ್ ಆಗಿರಬೇಕು. ಮಾತನಾಡುವ ಬದಲು ಕೆಲಸ ಮಾಡಬೇಕು. ಆ ಮೂಲಕ ನಮ್ಮ ಜವಾಬ್ದಾರಿ ತೋರಿಸಿಕೊಡಬೇಕು. ಮಾತನಾಡಿದರೆ ಸಾಲದು, ಮಾಡುವ ಕೆಲಸ ಜೋರಾಗಿ ಇರಬೇಕು. ಕೆಲಸ ಮಾಡುವ ಮನೋಭಾವ ಇರಬೇಕು.
ಕಳೆದ ಒಂದುವರೆ ತಿಂಗಳಿಂದ ನಾನು ಶೂಟಿಂಗ್ ರದ್ದು ಮಾಡಿ ಪ್ರಚಾರ ಮಾಡುತ್ತಿದ್ದೆನೆ. ನನಗೆ ರಾಜಕೀಯ ಗೊತ್ತಿಲ್ಲ. ನಾಯಕರು ಹೇಳಿದಂತೆ, ಅವರು ಕರೆದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ. ಎಲ್ಲಾ ಕಾಂಗ್ರೆಸ್ ನಾಯಕರ ಸಾಥ್ ಚೆನ್ನಾಗಿದೆ. ಪ್ರಚಾರದ ಕಾರ್ಯದ ಅನುಭವ ಚೆನ್ನಾಗಿ ಆಗುತ್ತಿದೆ. ಒಳ್ಳೆಯ ಬದಲಾವಣೆ ಬರಬೇಕಿದೆ. ಬಿಸಿಲಿನಲ್ಲಿ ನನಗೆ ಸೆಕೆ ಅನ್ನಿಸುತ್ತಿಲ್ಲ. ಜನರ ನಡುವೆ ಸೆಕೆ ಅನ್ನಿಸುತ್ತಿಲ್ಲ. ಯಾಕಂದ್ರೆ ಅವರು ಸೆಕೆಯಲ್ಲಿದ್ದಾರೆ. ನಾವು ಕೂಡ ಸೆಕೆಯಲ್ಲಿದ್ದೆವೆ ಎಂದಿದ್ದಾರೆ.

