ಮುಖ್ಯ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಧಿಕಾರಾವಧಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದೆ. ಮತ್ತೆ ಅಧಿಕಾರಾವಧಿಯಲ್ಲಿ ಮುಂದುವರೆಯಬೇಕು ಎಂದರೆ ಅರ್ಜಿ ಹಾಕಬೇಕಿತ್ತು. ಆದರೆ ರಾಹುಲ್ ದ್ರಾವಿಡ್ ಕೂಡ ನಾನು ಈ ಹುದ್ದೆಯಲ್ಲಿ ಮುಂದುವರೆಯಲ್ಲ ಎಂದೇ ಹೇಳಿದ್ದಾರೆ. ಹೀಗಾಗಿ ಹೊಸ ಕೋಚ್ ಆಯ್ಕೆ ಖಚಿತವಾಗಿದೆ.
ಈಗಾಗಲೇ ಅರ್ಜಿಗಳ ಪರಿಶೀಲನೆಯ ಕೆಲಸವೂ ಮುಗಿದಿದೆ. ಇನ್ನು ಕೆಲವೇ ದಿನಗಳಲ್ಲಿ ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಯಾರು ಎಂಬುದಕ್ಕೆ ಉತ್ತರವೂ ಸಿಗಲಿದೆ. ಜೊತೆಗೆ ಗೌತಮ್ ಗಂಭೀರ್ ಆಯ್ಕೆಯೂ ಬಹುತೇಕ ಖಚಿತವಾಗಿದೆ. ಆದರೆ ಗೌತಮ್ ಗಂಭೀರ್ ಈ ಹುದ್ದೆ ಒಪ್ಪಿಕೊಳ್ಳುವುದಕ್ಕೆ ಸುಮ್ಮನೆ ಓಕೆ ಎಂದಿಲ್ಲ. ಬಿಸಿಸಿಐಗೆ ಹಲವು ಷರತ್ತುಗಳನ್ನು ವಿಧಿಸಿದ್ದಾರಂತೆ.
ಕೋಚ್ ಹುದ್ದೆ ಖಾಲಿಯಾಗುತ್ತಿರುವಾಗಲೇ ಬಿಸಿಸಿಐ ಗೌತಮ್ ಗಂಭೀರ್ ಜೊತೆಗೆ ಈ ಬಗ್ಗೆ ಚರ್ಚೆ ನಡೆಸಿದೆ. ಈ ವೇಳರ ಬಿಸಿಸಿಐ ಬಿಗ್ ಬಾಸ್ ಗಳ ಮುಂದೆ ಗಂಭೀರ್ ಹಲವು ಷರತ್ತುಗಳನ್ನು ಮುಂದಿಟ್ಟಿದ್ದಾರಂತೆ. ಆ ಷರತ್ತುಗಳಿಗೂ ಈಗಾಗಲೇ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ ಹೀಗಾಗಿ ಗೌತಮ್ ಗಂಭೀರ್ ಅವರೇ ಫಿಕ್ಸ್ ಎಂಬುದು ಬಹುತೇಕ ಖಚಿತವಾಗಿದೆ.
ಗೌತಮ್ ಗಂಭೀರ್ ಹಾಕಿರುವ ಷರತ್ತುಗಳು ಹೀಗಿವೆ:
* ಸಪೋರ್ಟಿಂಗ್ ಸ್ಟಾಫ್ ಬದಲಾವಣೆ
* ತನಗೆ ಬೇಕಾದ ಸಪೋರ್ಟಿಂಗ್ ಸ್ಟಾಫ್ ಆಯ್ಕೆ
* ತಂಡದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ
* ನಾಯಕತ್ವ ಬದಲಾವಣೆಗೂ ಇಟ್ಟಿದ್ದಾರೆ ಷರತ್ತು
* 3.5 ವರ್ಷ ಬಿಸಿಸಿಐ ತನ್ನ ನಿರ್ಣಯ ತಿರಸ್ಕರಿಸಬಾರದು
* ಐಸಿಸಿ ಟೂರ್ನಿಗಳನ್ನು ಗೆಲ್ಲುವುದಕ್ಕೆ ಪ್ಲ್ಯಾನ್ ಅಂಡ್ ನೆರವು ಕಲ್ಪಿಸಬೇಕು.
ಗೌತಮ್ ಗಂಭೀರ್ ಈ ರೀತಿಯ ಷರತ್ತುಗಳನ್ನು ಬಿಸಿಸಿಐ ಮುಂದೆ ಇಟ್ಟಿದ್ದಾರೆ. ಬಿಸಿಸಿಐ ಕೂಡ ಈ ಷರತ್ತುಗಳಿಗೆ ಓಕೆ ಎಂದಿದೆ.