ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನದಿಂದ 38ನೇ ಸ್ಥಾನಕ್ಕೆ ಕುಸಿದ ಆದಾನಿ..!

 

ನವದೆಹಲಿ: ಹಿಂಡೆನ್ ಬರ್ಗ್ ವರದಿ ದಾಖಲಾದಾಗಿನಿಂದ ಅದಾನಿ ಸಾಮ್ರಾಜ್ಯ ಪತನದತ್ತ ಸಾಗುತ್ತಲೇ ಇದೆ. ಈಗ ಪೋರ್ಬ್ಸ್ ವರದಿ ಬಿಡುಗಡೆಯಾಗಿದ್ದು, ಶ್ರೀಮಂತರ ಪಟ್ಟಿಯಿಂದಾನೂ ಕೆಳಗಿಳಿದಿದ್ದಾರೆ. ಈ ಮೊದಲು 3ನೇ ಸ್ಥಾನದಲ್ಲಿದ್ದ ಆದಾನಿ ಈಗ ಶ್ರೀಮಂತರ ಪಟ್ಟಿಯಲ್ಲಿ 38ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಗೌತಮ್ ಅದಾನಿ ಷೇರು ಮಾರುಕಟ್ಟೆ ನಿರಂತರವಾಗಿ ಕುಸಿತ ಕಾಣುತ್ತಿದೆ. ಇದರಿಂದಾಗಿ ದೊಡ್ಟ ಸಂಕಷ್ಟ ಎದುರಾಗಿದೆ. ಸದ್ಯ ಅವರ ನಿವ್ವಳ ಮೌಲ್ಯ 33 ಶತಕೋಟಿಗೆ ಕುಸಿದಿದೆ. ಹಿಂಡೆನ್ ಬರ್ಗ್ ವರದಿ ಬಳಿಕ ಅದಾನಿ ಗ್ರೂಪ್ ಗೆ 150 ಕೋಟಿ ನಷ್ಟವಾಗಿದೆ.

ಸದ್ಯ ಮುಕೇಶ್ ಅಂಬಾನಿ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದಾರೆ. ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಆಸಕ್ತಿ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks