ಗೌಡತಿಯರ ಸೇನೆಯಿಂದ ದರ್ಶನ್ ವಿರುದ್ಧ ದೂರು ದಾಖಲು..!

suddionenews
1 Min Read

 

 

ಬೆಂಗಳೂರು: ನಟ ದರ್ಶನ್ ನೀಡಿದ್ದ ಹೇಳಿಕೆಯಿಂದ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ಇತ್ತಿಚೆಗಷ್ಟೇ ಡಿ-25 ಪರ್ವ ಬಹಳ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡುವಾಗ ನಟ ದರ್ಶನ್, ‘ಇವತ್ತು ಇವ್ಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗೋ’ ಎಂಬ ಡೈಲಾಗ್ ಹೊಡೆದಿದ್ದರು. ಇದೀಗ ಆ ಡೈಲಾಗ್ ವಿರುದ್ಧ ಮಹಿಳೆಯರು ತಿರುಗಿ ಬಿದ್ದಿದ್ದಾರೆ. ದೂರು ಕೂಡ ದಾಖಲಿಸಿದ್ದಾರೆ.

ಗೌಡತಿಯ ಸೇನೆ ಎಂಬ ಸಂಘಟನೆ ಈ ದೂರನ್ನು ನೀಡಿದೆ. ‘ಜನಪ್ರಿಯ ಹಾಗೂ ಜವಾಬ್ದಾರಿಯುತ ನಟ ಇಂತಹ ಪದಗಳನ್ನು ಬಳಸುವುದು ಎಷ್ಟು ಸರಿ..? ಈ ಹೇಳಿಕೆಗಳಿಂದ ಸಾರ್ವಜನಿಕವಾಗಿ ಮಹಿಳೆಯರಿಗೆ ಅವಮಾನ ಆಗಿದೆ. ದರ್ಶನ್ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಮಹಿಳೆಯರ ವಿರುದ್ಧ ದರ್ಶನ್ ಪ್ರಯೋಗಿಸಿದ ಪದಗಳಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳದೆ ಹೋದರೆ ಅವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬೆಳ್ಳಿ ಪರ್ವದಲ್ಲಿ ಇವತ್ತು ಅವಳು. ನಾಳೆ ಇನ್ನೊಭಳು. ನನಗೆ ನನ್ನ ಸೆಲೆಬ್ರೆಟಿಗಳಷ್ಟೇ ಮುಖ್ಯ. ನನ್ನ ಕೆಲಸವಷ್ಟೇ ಮುಖ್ಯ. ನನ್ನನ್ನು ನಂಬಿ ಬಂದ ನಿರ್ಮಾಪಕರಷ್ಟೇ ಮುಖ್ಯ. ಬೇರೆ ಯಾವುದಕ್ಜೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದರು. ಮಹಿಳೆಯರ ಬಗ್ಗೆ ಆಡಿದ್ದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿತ್ತು. ದರ್ಶನ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು. ಅಹೋರಾತ್ರ ಕೂಡ ವಿಡಿಯೋ ಮಾಡಿ ದರ್ಶನ್ ಅವರಿಗೆ ಬುದ್ದಿ ಮಾತು ಹೇಳಿದ್ದರು. ಹೆಣ್ಣು ಮಕ್ಕಳ ಬಗ್ಗೆ ಈ ರೀತಿ ಮಾತನಾಡಿದ್ದಕ್ಕೆ ಇದೀಗ ಒಕ್ಕಲಿಗ ಸಮುದಾಯದ ಮಹಿಳೆಯರು ಸಿಡಿಮಿಡಿಗೊಂಡಿದ್ದಾರೆ. ನೇರವಾಗಿ ಮಹಿಳಾ ಆಯೋಗಕ್ಕೆ ದೂರನ್ನು ದಾಖಲಿಸಿದ್ದಾರೆ‌. ದರ್ಶನ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *