ಗ್ಯಾಸ್ ಸಿಲಿಂಡರ್ ಕೊರತೆ ವಿಚಾರ : ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ವಿಜಯೇಂದ್ರ ಹೇಳಿದ್ದೇನು..?

1 Min Read

ಬೆಂಗಳೂರು: ಗ್ಯಾಸ್ ಸಿಲಿಂಡರ್ ಕೊರತೆಗಳು ರಾಜ್ಯದಲ್ಲಿ ಎಷ್ಟರ ಮಟ್ಟಿಗೆ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆಯ ಜೊತೆಗೆ ಸಿಲಿಂಡರ್ ಗಳ ಕೊರತೆಯೇ ಜಾಸ್ತಿಯಾಗಿದೆ. ಈ ಸಂಬಂಧ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿಭಟನೆಯನ್ನು ಮಾಡ್ತಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ವಿಚಾರವನ್ನು ಮುಂದಿಟ್ಟುಕೊಂಡು ಬೀದಿಗಿಳಿದು ನಿನ್ನೆಯಿಂದ ಪ್ರತಿಭಟನೆಯನ್ನ ಮಾಡಿದ್ದಾರೆ. ಈ ಕಾಂಗ್ರೆಸ್ ನವರಿಗೆ ಬಹುಶಃ ನಾಚಿಕೆ, ಮಾನ, ಮರ್ಯಾದೆ ಯಾವುದು ಇಲ್ಲ. ಮತ್ತೊಮ್ಮೆ ಅದನ್ನ ರುಜುವಾತ್ ಮಾಡಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವೆ ಕಳೆದ 12 ದಿನದಿಂದ ಯುದ್ಧ ನಡೀತಾ ಇದೆ. ಜಾಗತಿಕ ಮಟ್ಟದಲ್ಲಿ ಯಾವ್ಯಾವ ದೇಶದಲ್ಲಿ ಕಚ್ಚಾ ತೈಲದ ಮೇಲೆ ಪರಿಣಾಮ ಬೀರ್ತಾ ಇದೆ. ಎಲ್ಪಿಜಿ ಗ್ಯಾಸ್ ಮೇಲೆ ಯಾವ ರೀತಿಯ ಪರಿಣಾಮ ಬೀರ್ತಾ ಇದೆ. ಈ ಎಲ್ಲವೂ ಕೂಡ ಪತ್ರಿಕೆಗಳಲ್ಲಿ, ದೃಶ್ಯ ಮಾಧ್ಯಮದಲ್ಲಿ ಬರ್ತಾ ಇದಾವೆ. ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ಕಾಳಜಿಯನ್ನ ವಹಿಸಿ, ಇವತ್ತು‌ ಕಮರ್ಷಿಯಲ್ ಸಿಲಿಂಡರ್ ಬಳಕೆ ಬಗ್ಗೆ ಕೆಲ ನಿರ್ಬಂಧ ಹೇರುವ ಸಾಧ್ಯತೆಯನ್ನು ನೋಡ್ತಾ ಇದ್ದೇವೆ.

ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಅಂತ ಎಚ್ವರಿಕೆಯನ್ನ ವಹಿಸಿದ್ದಾರೆ. ಇಷ್ಟು ಗೊತ್ತಿದ್ದರು ಸಹ ಬೀದಿಗಿಳಿದು ಹೋರಾಟ ಮಾಡ್ತಾರೆ ಅಂದ್ರೆ, ಕಾಂಗ್ರೆಸ್ ಪಕ್ಷದ ಬೌಧ್ದಿಕ ದಿವಾಳಿತನ ಇದನ್ನ ತೋರಿಸುತ್ತೆ ಎಂದು ಹೇಳಿದ್ದಾರೆ ಜೊತೆಗೆ ಸರ್ಕಾರಿ ನೌಕರರಿಗೆ ಅದರಲ್ಲೂ ಪೊಕೀಸ್ ಇಲಾಖೆಯ ನೌಕರರಿಗೆ ಸಂಬಳ ಕೊಡದೆ ಇರುವುದರ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

Share This Article