ನವದೆಹಲಿ: ಇಡಿ ಅಧಿಕಾರಿಗಳು ನಿನ್ನೆ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಸಮಾಯವಕಾಶ ಕೇಳಿದರು ನೀಡದೆ ವಿಚಾರಣೆಗೆ ಹಾಜರಾಗಲೇಬೇಕು ಎಂದಿದ್ದರು. ಅದರಂತೆ ಇಂದು ಡಿಕೆ ಬ್ರದರ್ಸ್ ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.
ಅದಕ್ಕೂ ಮುನ್ನ ಮಾತನಾಡಿದ ಡಿಕೆಶಿ, ನನಗೆ ನನ್ನ ತಮ್ಮನಿಗೆ ಇಡಿಯವರು ಸಮನ್ಸ್ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ ಮಧ್ಯೆಯೂ ವಿಚಾರಣೆಗೆ ಕರೆದಿದ್ದಾರೆ. ನಮಗೆ ಟೈಮ್ ಕೊಡಿ ಎಂದರು ಇಡಿಯವರು ಕೇಳಲಿಲ್ಲ. ನಾವೂ ಕಾನೂನನ್ನು ಗೌರವಿಸಿ ವಿಚಾರಣೆಗೆ ಹಾಜರಾಗಿದ್ದೇವೆ. ಇಡಿಯವರು ಸಮನ್ಸ್ ನೀಡಿದ್ದಾರೆ ಅದಕ್ಕೆ ಬಂದಿದ್ದೇನೆ. ಆದರೆ ಯಾವ ವಿಚಾರವಾಗಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ.
ಭಾರತ್ ಜೋಡೋ ಯಾತ್ರೆ ವೇಳೆ ಇಡಿಯವರು ವಿಚಾರಣೆಗೆ ಕರೆದಿದ್ದಾರೆ. ಯಾತ್ರೆ ವೇಳೆ ತುಂಬಾ ಕೆಲಸಗಳು ಇರುತ್ತವೆ. ಪಾದಯಾತ್ರೆ ಬಳಿಕ ಕಸ ತೆಗೆಯಬೇಕು ಸ್ವಚ್ಛ ಮಾಡಬೇಕು. ಯಾತ್ರೆಗೆ ಬಂದ ನಾಯಕರನ್ನು ನೋಡಿಕೊಳ್ಳಬೇಕು. ಹೀಗಾಗಿ ಯಾತ್ರೆ ಮುಗಿದ ಮೇಲೆ ಬರುತ್ತೀವಿ ಅಂತ ಕೇಳಿದ್ದೆವು. ಆದರೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗಲೇಬೇಕು ಎಂದರು. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಿದ್ದೀವಿ ಎಂದಿದ್ದಾರೆ.