ಎರಡನೇ ಬಾರಿ ತರುಣ್ ಸುಧೀರ್ ಮನಸ್ಸು ಗೆದ್ದ ಚಿತ್ರದುರ್ಗದ ಗಗನ : ಈ ಬಾರಿ ಸಿಕ್ಕ ಗಿಫ್ಟ್ ಏನು ಗೊತ್ತಾ..?

1 Min Read

 

ಜೀ ಕನ್ನಡದಲ್ಲಿ ಮಹಾನಟಿ ಶೋ ನಡೀತಾ ಇದೆ. ಆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಆಡಿಷನ್ ಮಾಡಿ ಪ್ರತಿಭಾವಂತರನ್ನ ಕರೆತಂದಿದ್ದಾರೆ. ಅದರಲ್ಲಿ ಚಿತ್ರದುರ್ಗದ ಗಗನ ಕೂಡ ಒಬ್ಬರು. ಇಂದು ಹಿರಿಯ ನಟಿಯರನ್ನು ಸ್ಪೂರ್ತಿಯಾಗಿ ಪಡೆದು, ಅವರ ಸಿನಿಮಾಗಳ ಸಾಂಗ್ ಅಥವಾ ಡೈಲಾಗ್ ಹೇಳುವ ಮೂಲಕ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಬೇಕು. ಆ ಒಂದು ಟಾಸ್ಕ್ ನೀಡಲಾಗಿದೆ.

ಚಿತ್ರದುರ್ಗದ ಗಗನಾಗೆ ಭಾರತೀ ಅವರ ನಟನೆ ಮಾಡಿ ತೋರಿಸಬೇಕು. ಬಾಳ ಬಂಗಾರ ನೀನು ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಮನಸ್ಸು ಗೆದ್ದರು ಗಗನ. ಆದರೆ ತಮ್ಮ ಮಾತಿನಿಂದಾನೇ ಎಲ್ಲರನ್ನು ನಕ್ಕು ನಲಿಸಿದ್ದಾರೆ. ಗಗನ ತನಗಿರುವ ಹಾಸ್ಯ ಪ್ರತಿಭೆಯಿಂದಾನೇ ನಿರ್ದೇಶಕ ತರುಣ್ ಸುಧೀರ್ ಅವರ ಮನಸ್ಸನ್ನು ಎರಡೆರಡು ಬಾರಿ ಗೆದ್ದಿದ್ದಾರೆ.

ಗಗನ ಅವರ ಊರಿನಲ್ಲಿ ಗಣೇಶನ ಹಬ್ಬದ ಆಚರಣೆ ವೇಳೆ ಒಂದು ಡ್ಯಾನ್ಸ್ ಮಾಡುತ್ತಿದ್ದರಂತೆ. ಸೂರ್ಯ ನಿನ್ನ ತಾಯಿಯಾಣೆಗೂ ಹಾಡಿಗೇನೆ ಪ್ರತಿ ವರ್ಷ ಡ್ಯಾನ್ಸ್ ಮಾಡೋದು, ಮೂವತ್ತು ರೂಪಾಯಿ ಬಹುಮಾನ ಪಡೆಯುವುದು. ಅದರ ಜೊತೆಗೆ ಸ್ಟೀಲ್ ಲೋಟ, ತಟ್ಟೆ, ಬಾಕ್ಸ್ ಗಳನ್ನು ಪಡೆದಿದ್ದಾರೆ. ಅವರ ತಾಯಿ ಈಗಲೂ ನಾಲ್ಕು ಜನ ಮಕ್ಕಳು ಬಹುಮಾನದಲ್ಲಿ ತಂದಿರುವ ಪಾತ್ರೆಗಳನ್ನೇ ಬಳಸುತ್ತಿದ್ದಾರಂತೆ.

ಗಗನ ಮನೆಗೆ ಒನ್ಲಿ ಸ್ಟೀಲ್ ಐಟಂ ನೋ ಪ್ಲಾಸ್ಟಿಕ್. ಇದನ್ನೆಲ್ಲಾ ನೋಡಿದ ತರುಣ್ ಸುಧೀರ್ ಒಂದು ಬಹುಮಾನ ನೀಡಿದ್ದಾರೆ. ಸ್ಟೀಲ್ ಲೋಟ. ಇಷ್ಟು ದೊಡ್ಡ ಬಹುಮಾನ ಪಡೆದ ಗಗನ, ಈ ಎಲ್ಲಾ ಐಟಂ ಇಡುವುದಕ್ಕೆ ಸ್ಟ್ಯಾಂಡ್ ಕೇಳಿದ್ದಾರೆ. ಅದು ಕೂಡ ಸ್ಟೀಲ್ ನಲ್ಲೇ. ಗಗನ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದು ಕೇವಲ ಬಾತ್ ರೂಮಿನಲ್ಲಂತೆ. ಗಗನ ಕಾಮಿಡಿಗೆ ಇಡೀ ವೇದಿಕೆ ಬಿದ್ದು ಬಿದ್ದು ನಕ್ಕಿದೆ.

Share This Article
Leave a Comment

Leave a Reply

Your email address will not be published. Required fields are marked *