ಸುದ್ದಿಒನ್, ಚಿತ್ರದುರ್ಗ, ಜನವರಿ. 27 : ತಾಲ್ಲೂಕಿನ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ.
![](https://suddione.com/content/uploads/2024/10/gifmaker_me-5-1.gif)
ಟಿ. ಬಾಬುರೆಡ್ಡಿ ಸೋಮವಾರ ಅವಿರೋಧವಾಗಿ
ಚುನಾವಣಾಧಿಕಾರಿ ಸಂಜಯ್ ರಾಮ್. ಎಸ್. ನೇತೃತ್ವದಲ್ಲಿ ಕಸಬಾ ಕಡಬನಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಸದಸ್ಯರು ಆಯ್ಕೆ ಮಾಡಿದರು.
ಕಡಬನಕಟ್ಟೆ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿಯ ಸದಸ್ಯರುಗಳು ವಿವರ ಈ ಕೆಳಗಿನಂತಿದೆ.
1) ಶ್ರೀ ಜಿ ಟಿ ಬಾಬುರೆಡ್ಡಿ, ಅಧ್ಯಕ್ಷರು
2) ಶ್ರೀ ಕೆ ಟಿ ರುದ್ರಮುನಿ, ಉಪಾಧ್ಯಕ್ಷರು
3) ಶ್ರೀ ಬಿ ಎಲ್ ಗೋಪಾಲ, ಸದಸ್ಯರು
4) ಶ್ರೀ ಜಿ ಎಸ್ ಜಗದೀಶ್, ಸದಸ್ಯರು
5) ಶ್ರೀ ಎಸ್ ಆರ್ ರಘು, ಸದಸ್ಯರು
6) ಶ್ರೀ ಕೆ ಲೋಕೇಶ್, ಸದಸ್ಯರು
7) ಶ್ರೀ ಟಿ ಹನುಮಯ್ಯ, ಸದಸ್ಯರು
8) ಶ್ರೀ ಮಹಂತೇಶ್, ಸದಸ್ಯರು
9) ಶ್ರೀ ಎಂ ಟಿ ಮಂಜುನಾಥ, ಸದಸ್ಯರು
10) ಶ್ರೀಮತಿ ಪಾಪಮ್ಮ, ಸದಸ್ಯರು
11) ಶ್ರೀಮತಿ ಅನುಸೂಯಮ್ಮ, ಸದಸ್ಯರು
12) ಶ್ರೀಮತಿ ಓಬಕ್ಕ, ಸದಸ್ಯರು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿ ಸಂಜಯ್ ರಾಮ್ ತಿಳಿಸಿದ್ದಾರೆ.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಸಂಘದ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ಸನ್ಮಾನಿಸಿ, ಅಭಿನಂದಿಸಿದರು. ನೂತನ ಅಧ್ಯಕ್ಷ
ಜಿ ಟಿ ಬಾಬುರೆಡ್ಡಿ, ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ನಾನೀಗ ಸಂಘದ ಅಧ್ಯಕ್ಷನಾಗಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
![](https://suddione.com/content/uploads/2025/01/studio-11.webp)