ಧಾರವಾಡ: ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣ ದೊಡ್ಡದಾದ ತಿರುವು ಪಡೆದುಕೊಳ್ಳುತ್ತಿದೆ. ಪ್ರಮುಖ ಆರೋಪಿ ಬಸವರಾಜ್ ಮುತ್ತಗಿ, ತಪ್ಪೊಪ್ಪಿಗೆ ಹೇಳಿಕೆಯಲ್ಲಿ ವಿನಯ್ ಕುಲಕರ್ಣಿ ಹೆಸರನ್ನೇ ಹೇಳಿದ್ದರೆ. ಕೊಲೆ ಮಾಡಿಸಿದ್ದು ಅವರೇ ಎಂದು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ. ಯೋಗೀಶ್ ಗೌಡ ಹತ್ಯೆಯಾದಾಗ ಮೊದಲು ದೂರುದಾರರಾಗಿದ್ದು ಅವರ ಪತ್ನಿ ಮಲ್ಲಮ್ಮ. ಇದೀಗ ಪ್ರಕರಣ ಅಂತಿಮ ಹಂತಕ್ಕೆ ಬಂದು ನಿಂತಿರುವಾಗ ಸಾಕ್ಷ್ಯಾಧಾರ ಪಟ್ಟಿಯಿಂದ ಸಿಬಿಐ ಮಲ್ಲಮ್ಮ ಅವರನ್ನು ಕೈ ಬಿಡಲಾಗಿದೆ.
ಮಲ್ಲಮ್ಮ ಅವರು ತನಿಖೆಯಲ್ಲಿ ಸರಿಯಾಗಿ ಸ್ಪಂದಿಸಿರಲಿಲ್ಲ. ಈ ಮೊದಲು ತನಿಖೆ ನಡೆಸುವಾಗ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದರು. ಈ ಮಧ್ಯೆ ಕೆಲವು ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದವು. ಈ ನಿಟ್ಟಿನಲ್ಲಿ ಸಾಕ್ಷಿ ಪಟ್ಟಿಯಿಂದ ಮಲ್ಲಮ್ಮನ ಹೆಸರು ಕೈ ಬಿಡಲಾಗಿದೆ ಎನ್ನಲಾಗಿದೆ. ಈ ಮುಂಚೆ ಅಂದರೆ ಪೊಲೀಸರ ತನಿಖೆ ವೇಳೆಯು ಅನೇಕ ಅನಿರೀಕ್ಷಿತ ಬೆಳವಣಿಗೆಗಳು ನಡೆದಿದ್ದವು. ಇದರಿಂದಾಗಿ ಯೋಗೀಶ್, ಗುರುನಾಥ ಗೌಡ ಒಟ್ಟಾರೆ ಪ್ರಕರಣದಿಂದ ಮಲ್ಲಮ್ಮ ಅವರನ್ನು ದೂರವೇ ಇಟ್ಟಿದ್ದರು. ಆದರೆ ಸಿಬಿಐ ತನ್ನ ತನಿಖೆ ವೇಳೆ ಮಲ್ಲಮ್ಮ ಅವರನ್ನು ಸಾಕ್ಷಿಯಾಗಿ ಪರಿಗಣಿಸಿತ್ತು.
ಆದರೆ ಈಗ ಸಿಬಿಐ ಕೂಡ ಮಲ್ಲಮ್ಮ ಅವರನ್ನು ಸಾಕ್ಷಿ ಒಟ್ಟಿಯಿಂದ ಕೈಬಿಟ್ಟಿದೆ. ಯಾಕಂದ್ರೆ ಸಾಕ್ಷಿ ಹೇಳುವ ಸಂದರ್ಭದಲ್ಲಿ ಮಲ್ಲಮ್ಮ ಪ್ರತಿಕೂಲವಾಗಿ ಹೇಳಿಕೆ ನಿಡೀದರೆ ಅದು ಒಟ್ಟಾರೆ ಪ್ರಕರಣದ ಮೇಲೂ ಹಾಗೂ ವಿಚಾರಣೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂಬುದು ಸಿಬಿಐ ಲೆಕ್ಕಚಾರವಾಗಿದೆ. ಜೊತೆಗೆ ಸಿಬಿಐಗೆ ಈ ಅಧಿಕಾರವಿದೆ. ಪ್ರಾಸಿಕ್ಯೂಷನ್ ಸಾಕ್ಷಿ ಪಟ್ಟಿಯಿಂದ ತಮಗೆ ಬೇಡ ಎನಿಸಿದವರನ್ನು ಕೈಬಿಡುವ ಅಧಿಕಾರವಿದೆ. ಹೀಗಾಗಿ ಈ ನಿರ್ಧಾರ ಕೈಗೊಂಡಿದೆ.