ಚಂದ್ರಯಾನ 3 ಯಶಸ್ವಿಯಾಗಿದೆ. ಇಡೀ ಭಾರತೀಯರ ಕನಸು ಇದಾಗಿದೆ. ದಾಖಲೆಯನ್ನೇ ಇಸ್ರೋ ಬರೆದಾಗಿದೆ. ಚಂದ್ರಯಾನ 3 ಆರಂಭಕ್ಕೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಪೂಜೆಯನ್ನು ಮಾಡಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರಿಂದಾನೂ ಸಾಕಷ್ಟು ಬೆಂಬಲ ಸಿಕ್ಕಿದೆ. ಇದೀಗ ಚಂದ್ರಯಾನ 3 ಯಶಸ್ವಿ ಕ್ರೆಡಿಟ್ ಯಾರಿಗೆ ಎಂಬ ಚರ್ಚೆ ಶುರುವಾಗಿದೆ.
ಈ ಮಧ್ಯೆಯೇ ಇಸ್ರೋ ಮಾಜಿ ವಿಜ್ಞಾನಿ ನಂಬಿ ನಾರಾಯಣ್ ಅವರು ಮಾತನಾಡಿದ್ದಾರೆ. ಅದು ಇಸ್ರೋದ ಆರಂಭದ ದಿನಗಳು. ಕೇಂದ್ರದಲ್ಲಿದ್ದ ಹಿಂದಿನ ಕಾಂಗ್ರೆಸ್ ಸರ್ಕಾರ ಇಸ್ರೋಗೆ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಿಲ್ಲ. ಯಾಕಂದ್ರೆ ಇಸ್ರೋದ ವಿಜ್ಞಾನಿಗಳ ಮೇಲೆ ನಂಬಿಕೆ ಇರಲಿಲ್ಲ. ಯಾವಾಗ ವಿಶ್ವಾಸರ್ಹತೆಯನ್ನು ಇಸ್ರೋ ಪ್ರೂವ್ ಮಾಡಿತೋ, ಅಂದಿನಿಂದ ಕೇಂದ್ರ ಸರ್ಕಾರದಿಂದ ಹಣ ಮಂಜೂರಾಗುವುದಕ್ಕೆ ಶುರುವಾಯಿತು.
ಅವತ್ತು ನಮ ಬಳಿ ಕಾರಿ, ಜೀಪು ಏನು ಇರಲಿಲ್ಲ. ಬಜೆಟ್ ಕೂಡ ಹಂಚಿಕೆಯಾಗಿರಲಿಲ್ಲ. ಈ ಕ್ರೆಡಿಟ್ ಯಾರಿಗೆ ಕೊಡಬೇಕು ಹೇಳಿ. ನೀವೂ ರಾಷ್ಟ್ರೀಯ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡಾಗ ಕ್ರೆಡಿಟ್ ಅನ್ನು ಯಾರಿಗೆ ನೀಡಬೇಕು ಹೇಳಿ. ಅದು ಪ್ರಧಾನಮಂತ್ರಿಗೆ, ನಿಮಗೆ ಪ್ರಧಾನಮಂತ್ರಿ ಇಷ್ಟವಾಗದೆ ಇದ್ದರೆ, ಅದು ನಿಮ್ಮ ಸಮಸ್ಯೆ ಎಂದು ನಂಬಿ ನಾರಾಯಣ್ ಹೇಳಿದ್ದಾರೆ.