ಚಿತ್ರದುರ್ಗದಲ್ಲಿ ಡಿ.07 ರಂದು 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಸಮಾವೇಶಕ್ಕೆ ಭರದ ಸಿದ್ದತೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಡಿ. 02 : ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಚಿತ್ರದುರ್ಗದಲ್ಲಿ ಡಿ.07 ರಂದು ನಡೆಯಲಿರುವ 1008 ರೈತ ಕುಟುಂಬಕ್ಕೆ ಉಚಿತ ಸಾಮೂಹಿಕ ವಿವಾಹ ಸಮಾವೇಶಕ್ಕೆ ಭರದ ಸಿದ್ದತೆ ನಡೆಯುತ್ತಿದೆ ನಡೆಯುತ್ತಿದೆ ಈಗಾಗಲೇ 1008 ಜೋಡಿಗಳ ಆಯ್ಕೆಯಾಗಿದೆ ಎಂದು ಹಸಿರು ಸೇನೆಯ ಸಂಸ್ಥಾಪಕ ಅಧ್ಯಕ್ಷರು ಕಾರ್ಯಕ್ರಮದ ಸಂಚಾಲಕರಾದ ಚಂದ್ರಶೇಖರ್ ಬಿ.ಟಿ.ತಿಳಿಸಿದ್ದಾರೆ.

ಚಿತ್ರದುರ್ಗ ನಗರದ ಹೊರವಲಯದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದಲ್ಲಿ ಕಾರ್ಯಕ್ರಮಕ್ಕಾಗಿ ನಿರ್ಮಾಣವಾಗಿರುವ ಪೆಂಡಾಲ್‍ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಸಹಾ ವಿವಾಹಕ್ಕೆ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ನಮಗೆ 1300 ಅರ್ಜಿಗಳು ಬಂದಿದ್ದು ಇದರಲ್ಲಿ ಸಮಾಜ ಕಲ್ಯಾಣ ಇಲಾಖೆವತಿಯಿಂದ ಪರಿಶೀಲನೆಯನ್ನು ಮಾಡುವುದರ ಮೂಲಕ ಮಧು-ವರರನ್ನು ಆಯ್ಕೆ ಮಾಡಲಾಗಿದೆ. ಈ ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವವರೆಗೆ ತಾಳಿ,ಬಟ್ಟೆ, ಸೀರೆ, ತುಂಬಾ ಬಡವರಿಗೆ 5000 ರೂ ಮೌಲ್ಯದ ಮನೆಯ ಸಾಮಾನುಗಳನ್ನು ನೀಡಲಾಗುವುದು ಎಂದರು.

ಕಳೆದ ಹಲವಾರು ತಿಂಗಳುಗಳಿಂದ ಈ ಕಾರ್ಯಕ್ರಮಕ್ಕಾಗಿ ಸಕಲ ಸಿದ್ದತೆಯನ್ನು ಮಾಡಲಾಗುತ್ತಿದೆ. ಇಂದಿನ  ದಿನಮಾನದಲ್ಲಿ ಒಂದು ಮದುವೆ ಎಂದು ಲಕ್ಷಾಂತರ ರೂ ವೆಚ್ಚವಾಗುತ್ತದೆ ಇದಕ್ಕಾಗಿ ಸಾಲವನ್ನು ಮಾಡಬೇಕು ಇಲ್ಲವೆ ಇದ್ದ ಹೊಲವನ್ನು ಮಾರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಇದನ್ನು ತಪ್ಪಿಸುವ ಸಲುವಾಗಿ ಈ ಕಾರ್ಯಕ್ರವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಭಾಗವಹಿಸಿ ಯಾವುದೇ ಖರ್ಚು ಇಲ್ಲದೆ ಮದುವೆಯನ್ನು ಮಾಡಿಕೊಳ್ಳ ಬಹುದಾಗಿದೆ ಡಿ. 7ರಂದು ಬೆಳಿಗ್ಗೆ 10.30 ರಿಂದ 11.30ರವರೆಗೆ ವಿವಾಹ ನಡೆಯಲಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಸುಮಾರು 9 ಕೋಟಿ ವೆಚ್ಚವಾಗಲಿದೆ ಈಗಾಗಲೇ ಹಲವಾರು ದಾನಿಗಳು ಹಲವಾರು ವಸ್ತುಗಳನ್ನು ನೀಡಿದ್ದಾರೆ. ಈ ವಿವಾಹ ಕಾರ್ಯಕ್ರಮವೂ ಜಗದ್ಗುರು ಶಂಕರಚಾರ್ಯ ಶ್ರೀ ಭಾರತಿ ತೀರ್ಥ ಮಹಾ ಸನ್ನಿಧಾನಂನ ಶ್ರೀಗಳ ಆರ್ಶೀವಾದದೊಂದಿಗೆ, ಜಗದ್ಗುರು ಶಂಕರಚಾರ್ಯ ಶ್ರೀ ವಿಧುಶೇಖರ ಭಾರತಿ ಮಹಾ ಸನ್ನಿಧಾನಂನರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ,  ಇದರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು 1008 ತಾಳಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಇದ್ದಲ್ಲದೆ ರಾಜ್ಯದ ಹಲವಾರು ಜನತೆ ಈ ಕಾರ್ಯಕ್ರಮಕ್ಕೆ ಸಹಾಯವನ್ನು ಮಾಡಿದ್ದಾರೆ, ಈ ವಧು-ವರರಿಗೆ ಸರ್ಕಾರ ಸುಮಾರು 5 ಲಕ್ಷ ರೂ ವೆಚ್ಚದಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮವೂ ಚಿತ್ರದುರ್ಗ ನಗರದ ಹೊರ ವಲಯದ ಮಾದಾರ ಚನ್ನಯ್ಯಸ್ವಾಮಿ ಮಠದ ಪಕ್ಕದಲ್ಲಿನ ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕೀರಹುಸೇನೆರವರು ಬಡಗಿ ನಿವೇಶನದ ಜಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಇದೊಂದು ಕ್ರಾಂತಿಕಾರಿಕ ಕಾರ್ಯಕ್ರಮವಾಗಿದೆ ರಾಜ್ಯದಲ್ಲಿ ಈ ರೀತಿಯಾದ ಕಾರ್ಯಕ್ರಮವನ್ನು ಯಾರೂ ಸಹಾ ಮಾಡಿಲ್ಲ, ಇದು ಪೂರ್ಣ ಪ್ರಮಾಣದಲ್ಲಿ ರೈತರಿಗಾಗಿಯೇ ಮಾಡಿರುವ ಕಾರ್ಯಕ್ರಮ ಇದ್ದಾಗಿದೆ ಎಂದರು.

ಬಡಗಿ ಕಾರ್ಮಿಕರ ಸಂಘದ ಅಧ್ಯಕ್ಷರಾದ ಜಾಕೀರಹುಸೇನ್ ಮಾತನಾಡಿ ಇಂದಿನ  ದಿನಮಾನದಲ್ಲಿ ರೈತ ಮಕ್ಕಳಿಗೆ ಹೆಣ್ಣು ಸಿಗುವುದು ಕಷ್ಢವಾಗುತ್ತಿದೆ ಈ ಸಮಯದಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆವತಿಯಿಂದ ಚಿತ್ರದುರ್ಗದಲ್ಲಿ 1008 ರೈತ ಕಲ್ಯಾಣೋತ್ಸವ ನಡೆಸುತ್ತಿರುವುದು ಸ್ವಾಗತಾರ್ಹವಾಗಿದೆ, ಇದಕ್ಕೆ ನಮ್ಮ ಬಡಗಿ ಕಾರ್ಮೀಕರ ನಿವೇಶನದ ಜಾಗವನ್ನು ಉಪಯೋಗ ಮಾಡಿಕೊಳ್ಳಲು ನೀಡಲಾಗಿದೆ, ಒಂದು ಮದುವೆಯನ್ನು ಮಾಡಬೇಕಾದರೆ ಲಕ್ಷಾಂತರ ರೂ ವೆಚ್ಚವಾಗುತ್ತದೆ ಇದರ ಬದಲು ಈ ರೀತಿಯಾದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ಮದುವೆ ಮಾಡುವುದರಿಂದ ಅರ್ಥಿಕವಾಗಿ ಸಹಾಯವಾಗುತ್ತದೆ ಎಂದು ತಿಳಿಸಿದರು.

ಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತೋದಯ ಹಸಿರು ಸೇನೆಯ ಮಹಿಳಾ ರಾಜ್ಯಾಧ್ಯಕ್ಷರಾದ ದೇವಮ್ಮ, ನವಾಜ್ ಷರೀಫ್, ಪಾಪಣ್ಣ, ತಿಪ್ಪೇಸ್ವಾಮಿ, ಸೇರಿದಂತೆ ಇತರರುಣ ಭಾಗವಹಿಸಿದ್ದರು.

 

Share This Article